ರಾಯಚೂರು : ಅತ್ಯಾಚಾರಕ್ಕೆ ವಿರೋಧಿಸಿದ ಸೊಸೆಯನ್ನೇ ಕೊಂದಿದ್ದ ಮಾವನನ್ನು ಪೊಲೀಸರು ಹೆಡೆಮುರಿಕಟ್ಟಿದ್ದಾರೆ.
ಮಾವನೇ ಸೊಸೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದು, ನಿರಾಕರಿಸಿದ್ದಕ್ಕೆ ಆಕೆಯನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ರಾಯಚೂರು ಜಿಲ್ಲೆಯ ಜಲಮಗೆರಾ ಗ್ರಾಮದಲ್ಲಿ ನಡೆದಿತ್ತು. ಪ್ರಕರಣ ಸಂಬಂಧ ರಾಮಲಿಂಗಯ್ಯನನ್ನು ಪೊಲೀಸರು ಬಂಧಿಸಿದ್ದಾರೆ.
ದುಳ್ಳಮ್ಮ (27) ಕೊಲೆಯಾಗಿರುವ ಮಹಿಳೆ. ರಾಮಲಿಂಗಯ್ಯ ಸೊಸೆಯನ್ನ ಕೊಂದ ಆರೋಪಿ. ಅತ್ಯಾಚಾರಕ್ಕೆ ಸೊಸೆ ವಿರೋಧಿಸುತ್ತಿದ್ದಂತೆ ಆಕೆಯ ತಲೆಗೆ ಮಾರಣಾಂತಿಕವಾಗಿ ಹೊಡೆದು ಗ್ರಾಮದಿಂದ ಪರಾರಿಯಾಗಿದ್ದನು. ಗಂಭೀರವಾಗಿ ಗಾಯಗೊಂಡಿದ್ದ ದುಳ್ಳಮ್ಮ ಸ್ಥಳದಲ್ಲೇ ಸಾವನ್ನಪಿದ್ದರು.ಇಡಪನೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದರು. ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದರು. ಕೊನೆಗೂ ರಾಮಲಿಂಗಯ್ಯನನ್ನು ಪೊಲೀಸರು ಬಂಧಿಸಿದ್ದಾರೆ. ಈ ಹಿಂದೆ 2-3 ಬಾರಿ ರಾಮಲಿಂಗಯ್ಯ ಸೊಸೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದನು ಎಂಬ ಆಘಾತಕಾರಿ ಮಾಹಿತಿ ಬಯಲಾಗಿದೆ.