ನವದೆಹಲಿ : ಖ್ಯಾತ ಇಂಗ್ಲಿಷ್ ಕವಿ ಮತ್ತು ಮಾಜಿ ಐಪಿಎಸ್ ಅಧಿಕಾರಿ ಕೇಕಿ ಎನ್ ದಾರುವಾಲಾ ಅವರು ದೀರ್ಘಕಾಲದ ಅನಾರೋಗ್ಯ ಮತ್ತು ನ್ಯುಮೋನಿಯಾದಿಂದ ದೆಹಲಿಯ ಆಸ್ಪತ್ರೆಯಲ್ಲಿ ನಿಧನರಾದರು.
ಅವರ ಮಗಳು ಅನಾಹೈತಾ ಕಪಾಡಿಯಾ ಶುಕ್ರವಾರ ಮಾಹಿತಿ ನೀಡಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು. ಭಾರತದ ಅತ್ಯುತ್ತಮ ಇಂಗ್ಲಿಷ್ ಬರಹಗಾರರಾಗಿ ದಾರುವಾಲಾ ಗಮನ ಸೆಳೆದಿದ್ದರು.ಅವರು ಒಂದು ವರ್ಷದ ಹಿಂದೆ ಪಾರ್ಶ್ವವಾಯುವಿಗೆ ಒಳಗಾಗಿದ್ದರು ಮತ್ತು ಅಂದಿನಿಂದ ಆರೋಗ್ಯ ಸರಿಯಿರಲಿಲ್ಲ. ಅವರು ಮೂಲತಃ ನ್ಯುಮೋನಿಯಾದಿಂದ ನಿಧನರಾದರು” ಎಂದು ಕಪಾಡಿಯಾ ತಿಳಿಸಿದ್ದಾರೆ.
ಸಣ್ಣ ಕಥೆಗಳಿಗೆ ಹೆಸರುವಾಸಿಯಾದ ದಾರುವಾಲಾ ಅವರು ಅನಾಹೈಟಾ ಮತ್ತು ರೂಕ್ವೈನ್ ಎಂಬ ಇಬ್ಬರು ಹೆಣ್ಣುಮಕ್ಕಳು, ಅಳಿಯಂದಿರು ಮತ್ತು ನಾಲ್ವರು ಮೊಮ್ಮಕ್ಕಳನ್ನು ಅಗಲಿದ್ದಾರೆ.