alex Certify BREAKING : ಮೈಸೂರಿನ ಟಿ.ನರಸೀಪುರದ ಹೋಟೆಲ್ ನಲ್ಲಿ ‘ಸ್ಪೋಟಕ ವಸ್ತು’ ಪತ್ತೆ, ಬಾಂಬ್ ಸ್ಕ್ವಾಡ್ ದೌಡು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ಮೈಸೂರಿನ ಟಿ.ನರಸೀಪುರದ ಹೋಟೆಲ್ ನಲ್ಲಿ ‘ಸ್ಪೋಟಕ ವಸ್ತು’ ಪತ್ತೆ, ಬಾಂಬ್ ಸ್ಕ್ವಾಡ್ ದೌಡು..!

ಮೈಸೂರು : ಮೈಸೂರಿನ ಹೋಟೆಲ್ ಒಂದರಲ್ಲಿ ಸ್ಪೋಟಕ  ವಸ್ತು ಪತ್ತೆಯಾಗಿದ್ದು, ಆತಂಕದ ವಾತಾವರಣ ನಿರ್ಮಾಣವಾಗಿದೆ.

ಮೈಸೂರು ಜಿಲ್ಲೆ ಟಿ.ನರಸೀಪುರದ ಕೆಂಪಯ್ಯನಹುಂಡಿ ಗೇಟ್ ಬಳಿಯ ಹೋಟೆಲ್ ನಲ್ಲಿ ಸ್ಪೋಟಕ ಪತ್ತೆಯಾಗಿದೆ. ನೀಲಿ ಬಣ್ಣದ ಕವರ್ ಒಂದರಲ್ಲಿ ಸ್ಪೋಟಕ ವಸ್ತು ಪತ್ತೆಯಾಗಿದ್ದು, ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಹಾಗೂ ಬಾಂಬ್ ಸ್ಕ್ವಾಡ್ ದೌಡಾಯಿಸಿ ತಪಾಸಣೆ ನಡೆಸುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ನಿರೀಕ್ಷಿಸಲಾಗಿದೆ.

ನೀಲಿ ಕವರ್ ನಲ್ಲಿ ಟ್ಯೂಬ್ ಆಕಾರದ 9 ಸ್ಪೋಟಕ ವಸ್ತು, ನಾಡಬಾಂಬ್ ಇಟ್ಟಿರುವುದನ್ನು ನೋಡಿ ಆತಂಕಗೊಂಡ ಹೋಟೆಲ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಕೂಡಲೇ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ತಪಾಸಣೆ ನಡೆಸಿದೆ ಎಂದು ತಿಳಿದು ಬಂದಿದೆ. ಸ್ಪೋಟಕ ವಸ್ತು ಇರಿಸಿದ್ದು ಯಾರು ಎಂಬುದು ತನಿಖೆಯಿಂದಷ್ಟೇ ತಿಳಿದು ಬರಬೇಕಿದೆ.

 

 

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...