ಬೆಂಗಳೂರು : ನಟ ದರ್ಶನ್ ಗೆ ಎಪಿಡ್ಯೂರಲ್ ಇಂಜೆಕ್ಷನ್ ವರ್ಕ್ ಆಗಿದ್ದು, ಸದ್ಯಕ್ಕೆ ಆಪರೇಷನ್ ಬೇಡ ಎಂದು ವೈದ್ಯರು ತಿಳಿಸಿದ್ದಾರೆ.
ಹೌದು, ಬೆನ್ನುನೋವಿಗೆ ನಟ ದರ್ಶನ್ ಅವರು ಎಪಿಡ್ಯೂರಲ್ ಇಂಜೆಕ್ಷನ್ ತೆಗೆದುಕೊಂಡಿದ್ದರು. ಇದರಿಂದ ಅವರ ಬೆನ್ನುನೋವಿನಲ್ಲಿ ಬಹಳ ಸುಧಾರಣೆ ಕಂಡಿದ್ದು, ನೋವು ಕಡಿಮೆಯಾಗಿದೆ. ಈ ವಿಚಾರವನ್ನು ನಟ ದರ್ಶನ್ ಅವರು ವೈದ್ಯರಿಗೆ ತಿಳಿಸಿದ್ದು, ಸದ್ಯಕ್ಕೆ ಆಪರೇಷನ್ ಬೇಡ ಎಂದು ವೈದ್ಯರು ತಿಳಿಸಿದ್ದಾರೆ ಎನ್ನಲಾಗಿದೆ.
ಬೆನ್ನುನೋವಿಗೆ ಚಿಕಿತ್ಸೆ ಪಡೆಯಲು ನಟ ದರ್ಶನ್ ಇತ್ತೀಚೆಗೆ ಮಣಿಪಾಲ್ ಆಸ್ಪತ್ರೆಗೆ ಆಗಮಿಸಿದ್ದರು.ಸಂಕ್ರಾಂತಿ ಹಬ್ಬದ ವೇಳೆಗೆ ನಟ ದರ್ಶನ್ ಆಪರೇಷನ್ ಮಾಡಿಸಿಕೊಳ್ಳಲಿದ್ದು, ಫೆಬ್ರವರಿಯಲ್ಲಿ ಸಿನಿಮಾದ ಶೂಟಿಂಗ್ ನಲ್ಲಿ ಭಾಗಿಯಾಗಲಿದ್ದಾರೆ ಎಂದು ಹೇಳಲಾಗಿತ್ತು. ಆದರೀಗ ಆಪರೇಷನ್ ಬೇಡ ಎಂದು ವೈದ್ಯರು ಹೇಳಿದ್ದಾರೆ.
ಬೆನ್ನುನೋವಿನ ಹಿನ್ನೆಲೆ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ನಟ ದರ್ಶನ್ ಆಪರೇಷನ್ ಮಾಡಿಸಿಕೊಳ್ಳದೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು. ನಂತರ ಮೈಸೂರಿನ ಕಾಮಾಕ್ಷಿ ಆಸ್ಪತ್ರೆಗೆ ನಟ ದರ್ಶನ್ ಭೇಟಿ ನೀಡಿ ವೈದ್ಯರ ಸಲಹೆ ಪಡೆದು ವಾಪಸ್ ಬಂದಿದ್ದರು.