ನವದೆಹಲಿ : ಜಮ್ಮು-ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಶನಿವಾರ ಭಯೋತ್ಪಾದಕರ ಜೊತೆಗಿನ ಎನ್ ಕೌಂಟರ್ ನಲ್ಲಿ ಓರ್ವ ಯೋಧ ಹುತಾತ್ಮರಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಗುಪ್ತಚರ ಮಾಹಿತಿಯ ಆಧಾರದ ಮೇಲೆ ಭದ್ರತಾ ಪಡೆಗಳು ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದರು. ನಂತರ ಕುಲ್ಗಾಮ್ ಜಿಲ್ಲೆಯ ಮೊದರ್ಗಾಮ್ ಗ್ರಾಮದಲ್ಲಿ ಗುಂಡಿನ ಚಕಮಕಿ ಭುಗಿಲೆದ್ದಿದೆ.
ಗುಂಡಿನ ಚಕಮಕಿಯ ಬಗ್ಗೆ ಮಾಹಿತಿ ನೀಡಿದ ಕಾಶ್ಮೀರ ವಲಯ ಪೊಲೀಸರು, ಎಕ್ಸ್ನಲ್ಲಿ ಪೋಸ್ಟ್ನಲ್ಲಿ, “#Kulgam ಜಿಲ್ಲೆಯ ಮೊದರ್ಗಾಮ್ ಗ್ರಾಮದಲ್ಲಿ ಎನ್ಕೌಂಟರ್ ಪ್ರಾರಂಭವಾಯಿತು. ಪೊಲೀಸರು ಮತ್ತು ಭದ್ರತಾ ಪಡೆಗಳು ಕಾರ್ಯನಿರತವಾಗಿವೆ. ಹೆಚ್ಚಿನ ವಿವರಗಳು ನಂತರ ಬರಲಿವೆ ಎಂದು ಹೇಳಿದ್ದಾರೆ.