ನವದೆಹಲಿ: ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ನಡೆದ ಎರಡು ಪ್ರತ್ಯೇಕ ಗುಂಡಿನ ಚಕಮಕಿಯಲ್ಲಿ ಭದ್ರತಾ ಪಡೆಗಳು ಆರು ಉಗ್ರರನ್ನು ಹತ್ಯೆಗೈದಿದ್ದು, ಕಾರ್ಯಾಚರಣೆ ಪ್ರಾರಂಭವಾದ 24 ಗಂಟೆಗಳ ನಂತರ ಭಾನುವಾರ ಕಾರ್ಯಾಚರಣೆಯನ್ನು ಕೊನೆಗೊಳಿಸಿದೆ.
ಚಿನಿಗಾಮ್ನಲ್ಲಿ ಶನಿವಾರ ನಾಲ್ವರು ಉಗ್ರರು ಮತ್ತು ಒಬ್ಬ ಸೈನಿಕ ಸಾವನ್ನಪ್ಪಿದ್ದರೆ, ಮೊಡೆರ್ಗಾಮ್ನಲ್ಲಿ ಮತ್ತೊಬ್ಬ ಸೈನಿಕ ಸಾವನ್ನಪ್ಪಿದ್ದಾನೆ. ಮೊಡೆರ್ಗಾಮ್ ಕಾರ್ಯಾಚರಣೆ ಮುಕ್ತಾಯಗೊಳ್ಳುತ್ತಿದ್ದಂತೆ ಉಳಿದ ಇಬ್ಬರು ಭಯೋತ್ಪಾದಕರನ್ನು ಭಾನುವಾರ ಕೊಲ್ಲಲಾಗಿದೆ. ಈ ಮೂಲಕ ಒಟ್ಟು 6 ಮಂದಿಯನ್ನು ಹೊಡೆದುರುಳಿಸಲಾಗಿದೆ.
ಈ ಪ್ರದೇಶದಲ್ಲಿ ಭಯೋತ್ಪಾದಕರ ಉಪಸ್ಥಿತಿಯ ಬಗ್ಗೆ ಭದ್ರತಾ ಪಡೆಗಳಿಗೆ ಗುಪ್ತಚರ ಮಾಹಿತಿ ದೊರೆತ ನಂತರ ಸುಮಾರು 20 ಕಿ.ಮೀ ದೂರದಲ್ಲಿರುವ ಮೊದರ್ಗಾಮ್ ಮತ್ತು ಚಿನಿಗಾಮ್ ಗ್ರಾಮಗಳಲ್ಲಿ ಎನ್ಕೌಂಟರ್ ನಡೆದಿದೆ.