ನವದೆಹಲಿ: ನೇಪಾಳದಲ್ಲಿ 6.4 ತೀವ್ರತೆಯ ಭೂಕಂಪ ಸಂಭವಿಸಿದ ಎರಡು ದಿನಗಳ ನಂತರ ಸೋಮವಾರ ಮಧ್ಯಾಹ್ನ ದೆಹಲಿ ಮತ್ತು ಹತ್ತಿರದ ನಗರಗಳಲ್ಲಿ ಪ್ರಬಲ ಭೂಕಂಪನ ಸಂಭವಿಸಿದೆ.
ದೆಹಲಿ ಹಾಗೂ ಎನ್ ಸಿ ಆರ್ ಸುತ್ತಾಮುತ್ತಾ ಭೂಮಿ ಕಂಪಿಸಿದ್ದು, ಕಳೆದ 3 ದಿನದಲ್ಲಿ 2 ನೇ ಬಾರಿಗೆ ಭೂಮಿ ಕಂಪಿಸಿದೆ.
ಇಂದು ಸಂಜೆ 4:18 ಕ್ಕೆ ದೆಹಲಿ-ಎನ್ಸಿಆರ್ ಸೇರಿದಂತೆ ಉತ್ತರ ಭಾರತದ ಹಲವಾರು ಭಾಗಗಳಲ್ಲಿ ಭೂಕಂಪನ ಸಂಭವಿಸಿದೆ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್ಸಿಎಸ್) ಪ್ರಕಾರ, ರಿಕ್ಟರ್ ಮಾಪಕದಲ್ಲಿ 5.6 ತೀವ್ರತೆಯ ಭೂಕಂಪ ನೇಪಾಳದಲ್ಲಿ ಸಂಭವಿಸಿದೆ. ಕಳೆದ ನಾಲ್ಕು ದಿನಗಳಲ್ಲಿ ನೇಪಾಳದಲ್ಲಿ ಸಂಭವಿಸಿದ ಮೂರನೇ ದೊಡ್ಡ ಭೂಕಂಪ ಇದಾಗಿದೆ.