ಬೆಂಗಳೂರು : ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನ ಅವರ ಅಂತ್ಯಕ್ರಿಯೆ ಈಡಿಗ ಸಮುದಾಯದ ಸಂಪ್ರದಾಯದಂತೆ ಇಂದು ಸಂಜೆ 4 ಗಂಟೆಗೆ ಶ್ರೀರಾಂಪುರದ ಹರಿಶ್ಚಂದ್ರ ಘಾಟ್ನಲ್ಲಿ ನಡೆಯಲಿದೆ.
ಮಲ್ಲೇಶ್ವರಂನಲ್ಲಿರುವ ತಂದೆ ಬಿ.ಕೆ.ಶಿವರಾಂ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಅಂತಿಮ ದರ್ಶನ ಪಡೆದಿದ್ದಾರೆ. ಅಂತಿಮ ದರ್ಶನದ ಬಳಿಕ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು, ಸ್ಪಂದನಾ ಅವರ ಹಠಾತ್ ಮರಣ ನಮಗೆಲ್ಲಾ ದಿಗ್ಬ್ರಮೆ ಉಂಟುಮಾಡಿದೆ. ಒಂದು ವಾರದ ಹಿಂದೆ ದಂಪತಿಗಳು ನನ್ನನ್ನು ಭೇಟಿ ಮಾಡಿದ್ದರು. ತುಂಬಾ ಆರೋಗ್ಯಕರವಾಗಿದ್ದರು. ಇಡೀ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ, ಬಹಳ ಚಿಕ್ಕ ವಯಸ್ಸಿನಲ್ಲೇ ಹೀಗಾಗಿರುವುದು ನೋವು ತಂದಿದೆ ಎಂದರು.
ಶ್ರೀರಾಂಪುರದ ಹರಿಶ್ಚಂದ್ರ ಘಾಟ್ ಚಿತಾಗಾರದಲ್ಲಿ ಸ್ಪಂದನ ಅವರ ಅಂತ್ಯಕ್ರಿಯೆ ನಡೆಸಲು ಚಿನ್ನೇಗೌಡರು ಮತ್ತು ಬಿ.ಕೆ.ಶಿವರಾಂ ಕುಟುಂಬಸ್ಥರು ನಿರ್ಧರಿಸಿದ್ದಾರೆ. ಅಂತ್ಯಕ್ರಿಯೆಯ ಆಚರಣೆಗಳು ಈಡಿಗ ಸಮುದಾಯದ ಸಂಪ್ರದಾಯಗಳಿಗೆ ಅಂತ್ಯಕ್ರಿಯೆ ನಡೆಯಲಿದೆ.