
ಚಿತ್ರದುರ್ಗ : ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ವದ್ದಿಕೆರೆ ಗ್ರಾಮದ ಬಳಿ ಇಂದು ಬೆಳ್ಳಂಬೆಳಗ್ಗೆ ಮಾನವ ರಹಿತ ಡ್ರೋನ್ ಮಾದರಿ ಪತನವಾಗಿದೆ.
ವದ್ದಿಗೆರೆ ಸಮೀಪದ ಜಮೀನಿನಲ್ಲಿ ಪರೀಕ್ಷಾರ್ಥ ಹಾರಾಟ ನಡೆಸುತ್ತಿದ್ದ ಡ್ರೋನ್ ಮಾದರಿ ವಿಮಾನ ಪತನವಾಗಿದ್ದು, ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ.
ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಸಿದ್ದಪಡಿಸಿದ್ದ ಯುದ್ದ ವಿಮಾನ ನಾಯಕನಹಟ್ಟಿ ಸಮೀಪದ ಕುದಾಫುರ ವಾಯುನೆಲೆಯಿಂದ ಇಂದು ಬೆಳಗ್ಗೆ ಹಾರಾಟ ನಡೆಸಿದ್ದು, ತಾಂತ್ರಿಕ ದೋಷದಿಂದ ಪತನವಾಗಿದೆ ಎನ್ನಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.