ಹಿಂದೂ ಮಹಾಸಾಗರದಲ್ಲಿ ‘ಇಸ್ರೇಲ್’ ಸಂಬಂಧಿತ ವ್ಯಾಪಾರಿ ಹಡಗು ಮೇಲೆ ಡ್ರೋನ್ ದಾಳಿ ನಡೆದಿದ್ದು, ಎಚ್ಚರಿಕೆ ನೀಡಲಾಗಿದೆ.
ಡ್ರೋನ್ ದಾಳಿಯಿಂದ ಹಿಂದೂ ಮಹಾಸಾಗರದಲ್ಲಿ ವ್ಯಾಪಾರಿ ಹಡಗಿಗೆ ಹಾನಿಯಾಗಿದೆ ಹೊರತು ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಎರಡು ಕಡಲ ಏಜೆನ್ಸಿಗಳು ಸುದ್ದಿ ಸಂಸ್ಥೆಗಳು ತಿಳಿಸಿವೆ. ಒಂದು ಹಡಗು ಇಸ್ರೇಲ್ ಗೆ ಸಂಪರ್ಕ ಹೊಂದಿತ್ತು. ಇದು ಇಸ್ರೇಲ್ನ ಲೈಬೀರಿಯಾ-ಫ್ಲಾಗ್ಡ್ ರಾಸಾಯನಿಕ/ಉತ್ಪನ್ನಗಳ ಟ್ಯಾಂಕರ್ಗಳನ್ನು ಹೊತ್ತೊಯ್ಯುತ್ತಿದ್ದ ಹಡಗು ಎಂದು ಹೇಳಲಾಗಿದೆ.
ಬ್ರಿಟಿಷ್ ಮಿಲಿಟರಿಯ ಯುನೈಟೆಡ್ ಕಿಂಗ್ಡಮ್ ಮಾರಿಟೈಮ್ ಟ್ರೇಡ್ ಆಪರೇಷನ್ಸ್ ಮತ್ತು ಕಡಲ ಭದ್ರತಾ ಸಂಸ್ಥೆ ಅಂಬ್ರೆ ಪ್ರಕಾರ, ಭಾರತದ ಕರಾವಳಿ ಭಾಗದಲ್ಲಿ ಈ ದಾಳಿ ನಡೆದಿದೆ. ಈ ದಾಳಿಯಿಂದ ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಹೇಳಲಾಗಿದೆ.ಈ ದಾಳಿಯನ್ನು ಯಾರು ನಡೆಸಿದ್ದಾರೆ..? ಏಕೆ ನಡೆಸಿದ್ದಾರೆ ಎಂಬುದು ವರದಿಯಾಗಿಲ್ಲ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.