ದೆಹಲಿ ವಿಧಾನಸಭೆ ಚುನಾವಣೆಗೆ ಮತದಾನ ನಡೆಯುತ್ತಿದ್ದು, ಬೆಳಗ್ಗೆ 11 ಗಂಟೆಯವರೆಗೆ ಶೇ.19.95ರಷ್ಟು ಮತದಾನ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಮತದಾನಕ್ಕೆ ಮತದಾರರರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಮತ ಚಲಾಯಿಸಿದ ನಂತರ ಮಾತನಾಡಿದ ಎಎಪಿ ನಾಯಕ ಅರವಿಂದ್ ಕೇಜ್ರಿವಾಲ್ ಅವರ ಪತ್ನಿ ಸುನೀತಾ ಕೇಜ್ರಿವಾಲ್, “ದೆಹಲಿಯ ಜನರು ತುಂಬಾ ಬುದ್ಧಿವಂತರು. ನಾವು ಅವರನ್ನು ನಂಬುತ್ತೇವೆ. ಅವರು ”ಗೂಂಡಾಗಿರಿ ಸಹಿಸುವುದಿಲ್ಲ. ಆದ್ದರಿಂದ, ದೆಹಲಿಯ ಜನರು ಸರಿಯಾದ ಆಯ್ಕೆಯನ್ನು ಮಾಡುತ್ತಾರೆ ಎಂದು ನಾವು ದೃಢವಾಗಿ ನಂಬುತ್ತೇವೆ” ಎಂದು ಹೇಳಿದರು.