ಬೆಂಗಳೂರು : ಬೆಂಗಳೂರಿನಲ್ಲಿ ಇಂದಿನಿಂದ ಏರ್ ಶೋ ನಡೆಯಲಿದ್ದು, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇಂದು ಚಾಲನೆ ನೀಡಿದ್ದಾರೆ.
ಬೆಂಗಳ ರಿನ ಯಲಹಂಕ ಏರ್ ಫೋರ್ಸ್ ಸ್ಟೇಷನ್ ನಲ್ಲಿ ಇಂದಿನಿಂದ (ಫೆಬ್ರವರಿ 10) 14 ರವರೆಗೆ ಏಷ್ಯಾದ ಅತಿ ದೊಡ್ಡ ವೈಮಾನಿಕ ಪ್ರದರ್ಶನ ಏರೋ ಇಂಡಿಯಾ ಶೋ ನಡೆಯಲಿದೆ. ಬಾನಂಗಳದಲ್ಲಿ ಲೋಹದ ಹಕ್ಕಿಗಳ ಪ್ರದರ್ಶನ ನಡೆಯಲಿದ್ದು, ಸಾರ್ವಜನಿಕರನ್ನು ಮೋಡಿ ಮಾಡಲಿದೆ.
ಯುದ್ಧ ವಿಮಾನಗಳ ಹಾರಾಟ ಪ್ರದರ್ಶನ ವೀಕ್ಷಿಸಲು ಸಾರ್ವಜನಿಕರಿಗೆ ಒಂದು ಸಾವಿರ ರೂಪಾಯಿ ಶುಲ್ಕ ನಿಗದಿಪಡಿಸಲಾಗಿದ್ದು, ಆನ್ಲೈನ್ ನಲ್ಲಿ ನೋಂದಣಿ ಪ್ರಕ್ರಿಯೆ ಆರಂಭಿಸಲಾಗಿದೆ.ಏರೋ ಇಂಡಿಯಾದಲ್ಲಿ 140ಕ್ಕೂ ಅಧಿಕ ವಿದೇಶಿ ರಕ್ಷಣಾ ಉತ್ಪನ್ನಗಳ ಉತ್ಪಾದಕ ಕಂಪನಿಗಳು ನೋಂದಣಿ ಮಾಡಿಕೊಂಡಿವೆ. ಮಿಲಿಟರಿ ಮತ್ತು ಮಿಲಿಟರಿ ಸರಕು ಸಾಗಾಣೆ ವಿಮಾನ, ಶಸ್ತ್ರಾಸ್ತ್ರ, ಬಾಹ್ಯಾಕಾಶ ಕ್ಷೇತ್ರಕ್ಕೆ ಸಂಬಂಧಿಸಿದ ಕಂಪನಿಗಳು ಭಾಗವಹಿಸಲಿವೆ.
#WATCH | Aero India 2025 | Bengaluru, Karnataka | Defence Minister Rajnath Singh says, “The Maha Kumbh is underway in India… Another Maha Kumbh has started in the form of Aero India. Prayagraj’s Maha Kumbh is for introspection and Aero India’s Maha Kumbh is for research.… pic.twitter.com/pfc26nLNtb
— ANI (@ANI) February 10, 2025
ಫೆಬ್ರವರಿ 10ರಂದು ಉದ್ಘಾಟನಾ ಸಮಾರಂಭ ಇರುವುದರಿಂದ ಸಾರ್ವಜನಿಕರಿಗೆ ಪ್ರವೇಶ ಇರುವುದಿಲ್ಲ. ಶುಲ್ಕ ಪಾವತಿಸಿ ಟಿಕೆಟ್ ಖರೀದಿಸಿದವರು ಫೆಬ್ರವರಿ 11 ರಿಂದ 14ರ ವರೆಗೆ ನಾಲ್ಕು ದಿನಗಳಲ್ಲಿ ಯಾವುದಾದರೂ ಒಂದು ದಿನ ಏರ್ ಡಿಸ್ ಪ್ಲೇ ಏರಿಯಾಗೆ ತೆರಳಿ ಪ್ರದರ್ಶನ ವೀಕ್ಷಿಸಬಹುದು. ಬೆಳಗ್ಗೆ ಮತ್ತು ಮಧ್ಯಾಹ್ನದ ಅವಧಿ ಸೇರಿ ನಿತ್ಯ ಎರಡು ಬಾರಿ ಪ್ರದರ್ಶನ ಇರುತ್ತದೆ.
#WATCH | Aero India 2025 | Bengaluru: Surya Kiran Aerobatic Team’s BAE Hawk Mk 132 take off giving out colors of the National Flag, as spectators look on. pic.twitter.com/jvMSWLbCks
— ANI (@ANI) February 10, 2025
#WATCH | Bengaluru, Karnataka | Defence Minister Rajnath Singh attends the Aero India 2025 being held at Yelahanka Air Force Station.
Aero India 2025 is scheduled to be held from February 10 to 14. Aero India 2025 is the 15th edition of Asia’s top aerospace exhibition. pic.twitter.com/mbeG3jKZVj
— ANI (@ANI) February 10, 2025
ಏರ್ ಶೋ 2025 ಫೆಬ್ರವರಿ 10ರಿಂದ ಫೆಬ್ರವರಿ 14ರ ವರೆಗೆ ಪ್ರತಿದಿನವೂ ಬೆಳಿಗ್ಗೆ 9ರಿಂದ ಸಂಜೆ 6ರವರೆಗೆ ನಡೆಯಲಿದೆ. ಏರ್ ಶೋದಲ್ಲಿ ಬೆಳಿಗ್ಗೆಯಿಂದ ಸಂಜೆಯ ವರೆಗೆ ಸುತ್ತಾಡುವುದಕ್ಕೆ ಅವಕಾಶ ಇರಲಿದೆ. ಫೆಬ್ರವರಿ 13 ಹಾಗೂ 14ರಂದು ಸಾರ್ವಜನಿಕರಿಗೆ ಅವಕಾಶ ಇರಲಿದೆ.
ಟಿಕೆಟ್ ದರ ಎಷ್ಟು..?
ಭಾರತೀಯರಿಗೆ 2,500 ರೂಪಾಯಿ ಇದ್ದರೆ, ವಿದೇಶಿಗರಿಗೆ ಯುಎಸ್ ಡಾಲರ್ 50 ಇರಲಿದೆ. ಎಡಿವಿಎ ಪಾಸ್: ಭಾರತೀಯರಿಗೆ 1,000 ರೂ | ವಿದೇಶಿಗರಿಗೆ ಯುಎಸ್ ಡಾಲರ್ 50 ಇರಲಿದೆ. ವ್ಯಾಪಾರ ಪಾಸ್: ಭಾರತೀಯರಿಗೆ 5,000 ಸಾವಿರ ಹಾಗೂ ವಿದೇಶಿಗರಿಗೆ ಯುಎಸ್ ಡಾಲರ್ 50 ಇರಲಿದೆ.
ಟಿಕೆಟ್ ಬುಕ್ ಮಾಡೋದು ಹೇಗೆ..?
1) ನೀವು ಏರೋ ಇಂಡಿಯಾದ ಅಧಿಕೃತ ವೆಬ್ಸೈಟ್ ataeroindia.gov.in.ಗೆ ಭೇಟಿ ನೀಡಿ *
2) ವೆಬ್ಸೈಟ್ನ ಹೋಮ್ ಪೇಜ್ನಲ್ಲಿ ಕಾಣಿಸುವ ಸಂದರ್ಶಕರ ನೋಂದಣಿ ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ
3) ನಿಮಗೆ ಯಾವ ಮಾದರಿಯ ಪಾಸ್ ಬೇಕು ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
4) ನಿಮ್ಮ ಹೆಸರು ಹಾಗೂ ಮೊಬೈಲ್ ಸಂಖ್ಯೆ ಮತ್ತು ಅಗತ್ಯ ವಿವರಗಳನ್ನು ನಮೂದಿಸಿ.
5) ಟಿಕೆಟ್ ಮೊತ್ತವನ್ನು ಪಾವತಿ ಮಾಡಿ ಹಾಗೂ ಸಲ್ಲಿಸು ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಇದಾದ ಮೇಲೆ ನಿಮಗೆ ಏರೋ ಇಂಡಿಯಾ 2025ರ ಪಾಸ್ ಸಿಗಲಿದೆ. ಇನ್ನು ಹೆಚ್ಚಿನ ಮಾಹಿತಿ ಅಥವಾ ವಿವರಗಳಿಗೆ ಅಧಿಕೃತ ಏರೋ ಇಂಡಿಯಾ ವೆಬ್ಸೈಟ್ಗೆ ಭೇಟಿ ನೀಡಬಹುದಾಗಿದೆ.