ಮೈಸೂರು : ಪ್ರತಿ ವರ್ಷ ಮೈಸೂರಿನಲ್ಲಿ ನಡೆಯೋ ದಸರಾ ಆಚರಣೆ, ಜಂಬೂ ಸವಾರಿ ವಿಶ್ವ ಪ್ರಸಿದ್ಧವಾಗಿದೆ. ಇಲ್ಲಿ ಮಹಿಷಾಸುರನ ದಸರಾ ಮಾಡಬೇಕು ಅನ್ನೋದು ಕೆಲವರ ವಾದವಾದರೆ. , ಈ ವಾದಕ್ಕೆ ಪ್ರಬಲ ವಿರೋಧ ಕೂಡಾ ಇದೆ.
ಇದೀಗ ಸೆ.29 ರಂದು ‘ಮಹಿಷ ದಸರಾ’ ಬದಲು ‘ಮಹಿಷ ಮಂಡಲೋತ್ಸವ’ ಆಚರಣೆಗೆ ಸಮಿತಿ ನಿರ್ಧರಿಸಿದೆ.
ಹೌದು, ಸೆ.29 ರಂದು ‘ಮಹಿಷ ದಸರಾ’ ಬದಲು ‘ಮಹಿಷ ಮಂಡಲೋತ್ಸವ’ ಆಚರಣೆಗೆ ಸಮಿತಿ ನಿರ್ಧರಿಸಿದೆ. ಸೆ.29 ರಂದು ಚಾಮುಂಡಿ ಬೆಟ್ಟದ ಮಹಿಷಾಸುರನ ಪ್ರತಿಮೆಗೆ ಪುಷ್ಪಾಚರಣೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತಿದೆ.
ಮಹಿಷ ಮಂಡಲೋತ್ಸವ ಕಾರ್ಯಕ್ರಮಕ್ಕೆ ಸಂಸದ ಯದುವೀರ್ ಒಡೆಯರ್ ಗೆ ಆಹ್ವಾನ ನೀಡಲು ಸಮಿತಿ ನಿರ್ಧರಿಸಿದೆ. ಸೆ.29 ರಂದು ಮೈಸೂರಿನ ಪುರಭವನದಲ್ಲಿ ಕಾರ್ಯಕ್ರಮ ನಡೆಯಲಿದೆ.