ಬೆಂಗಳೂರು : ಕಾಂಗ್ರೆಸ್ ಮುಖಂಡ, ಅಲ್ಪಸಂಖ್ಯಾತರ ನಿಗಮದ ಅಧ್ಯಕ್ಷ ಬಿ.ಕೆ ಅಲ್ತಾಫ್ ಖಾನ್ ಗೆ ಕೊಲೆ ಬೆದರಿಕೆ ಬಂದಿದ್ದು, ಜೆಜೆ ನಗರ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.
ಆರ್ ಎಸ್ ಎಸ್ ಚಮಚಾಗಿರಿ ಮಾಡಿದರೆ ನಿನ್ನನ್ನು ಸುಮ್ಮನೆ ಬಿಡಲ್ಲ ಎಂದು ಕರೆ ಮಾಡಿ ಬೆದರಿಕೆಯೊಡ್ಡಲಾಗಿದೆ. ಕೋರ್ಟ್ ನಲ್ಲಿರುವ ಕೇಸ್ ಗೂ ಸಾಕ್ಷಿ ಹೇಳದಂತೆ ಬೆದರಿಕೆ ಹಾಕಲಾಗಿದೆ .ಅಲ್ತಾಫ್ ಪರಿಚಯಸ್ ಅಜ್ಮತ್ ಉಲ್ಲಾಗೆ ಕರೆ ಮಾಡಿ ಬೆದರಿಕೆ ಹಾಕಲಾಗಿದೆ.
ಫೆ.5 ರಂದು ರಾತ್ರಿ 8 ಗಂಟೆಗೆ ಬೆದರಿಕೆ ಕರೆ ಬಂದಿದೆ ಎಂದು ಹೇಳಲಾಗಿದೆ. ಬಿ.ಕೆ ಅಲ್ತಾಫ್ ಖಾನ್ ಜೆಜೆ ನಗರ ಠಾಣೆಯಲ್ಲಿ ಎಫ್ ಐ ಆರ್ ದಾಖಲಿಸಿದ್ದಾರೆ.