ಉತ್ತರಾಖಂಡ : ಉತ್ತರಾಖಂಡದಲ್ಲಿ ಚಾರಣಕ್ಕೆ ತೆರಳಿ ಮೃತಪಟ್ಟ ಮೂವರು ಕರ್ನಾಟಕದವರ ಶವವನ್ನು ಅವರ ಕುಟುಂಬದವರಿಗೆ ಹಸ್ತಾಂತರ ಮಾಡಲಾಗಿದೆ ಎಂದು ಸಚಿವ ಕೃಷ್ಣಭೈರೇಗೌಡ ಮಾಹಿತಿ ನೀಡಿದ್ದಾರೆ.
1) ಪದ್ಮಿನಿ ಹೆಗಡೆ , 2) ವೆಂಕಟೇಶ್ ಪ್ರಸಾದ್ , 3) ಆಶಾ ಸುಧಾಕರ್ ಅವರ ಶವವನ್ನು ಅವರ ಕುಟುಂಬದವರಿಗೆ ಹಸ್ತಾಂತರ ಮಾಡಲಾಗಿದೆ ಎಂದು ಸಚಿವ ಕೃಷ್ಣಭೈರೇಗೌಡ ಮಾಹಿತಿ ನೀಡಿದ್ದಾರೆ.
ಇನ್ನುಳಿದ 6 ಮಂದಿ ಶವಗಳನ್ನು ಮಧ್ಯಾಹ್ನದ ನಂತರ ಅವರ ಕುಟುಂಬಕ್ಕೆ ಹಸ್ತಾಂತರ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ಉತ್ತರಾಖಂಡದ ಉತ್ತರಕಾಶಿಯ ಸಹಸ್ತ್ರ ತಾಲ್ಗೆ ಚಾರಣಕ್ಕೆ ತೆರಳಿದ್ದ ಕರ್ನಾಟಕದ 9 ಮಂದಿ ಸಾವನ್ನಪ್ಪಿದ್ದಾರೆ. ಕರ್ನಾಟಕ, ಮಹಾರಾಷ್ಟ್ರ ಮತ್ತು ಸ್ಥಳೀಯ ಮಾರ್ಗದರ್ಶಿಗಳನ್ನು ಒಳಗೊಂಡ ತಂಡವು ಮೇ 29 ರಂದು ಸಾಹಸವನ್ನು ಪ್ರಾರಂಭಿಸಿತು, ಜೂನ್ 7 ರೊಳಗೆ ವಾಪಸ್ ಆಗಲು ನಿರ್ಧರಿಸಿತ್ತು.