ಮೈಸೂರು : ಡಿಸಿಎಂ ಡಿಕೆ ಶಿವಕುಮಾರ್ ಸಿಎಂ ಆಗೋದು ಫಿಕ್ಸ್ ಎಂದು ಶಾಸಕ ಜಿ.ಟಿ ದೇವೇಗೌಡ ಭವಿಷ್ಯ ನುಡಿದಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಜಿಟಿ ದೇವೇಗೌಡ ಕಾಂಗ್ರೆಸ್ ನಾಯಕರ ಹೇಳಿಕೆಗಳ ನಡುವೆ ಶಾಸಕ ಜಿಟಿ ದೇವೇಗೌಡ ಭವಿಷ್ಯ ನುಡಿದಿದ್ದು, ಡಿಸಿಎಂ ಡಿಕೆ ಶಿವಕುಮಾರ್ ಖಂಡಿತ ಸಿಎಂ ಆಗುತ್ತಾರೆ, ಆದ್ರೆ ಡಿಸಿಎಂ ಡಿಕೆಶಿ ಸಿಎಂ ಆಗಲು ಸಿದ್ದರಾಮಯ್ಯ ಬೆಂಬಲ ಬೇಕು ಎಂದಿದ್ದಾರೆ.
10 ಶಾಸಕರನ್ನು ಇಟ್ಟುಕೊಂಡು ಸಿಎಂ ಆಗಲು ಆಗಲ್ಲ, ಡಿಕೆಶಿ ಸಿಎಂ ಆಗಲು ಸಿದ್ದರಾಮಯ್ಯ ಬೆಂಬಲ ಬೇಕು. ಡಿಕೆಶಿ ಖಂಡಿತ ಸಿಎಂ ಆಗ್ತಾರೆ, ಆದರೆ ಯಾವಾಗ ಆಗ್ತಾರೆ ಅಂತ ಗೊತ್ತಿಲ್ಲ. ಸಿದ್ದರಾಮಯ್ಯನವರ ಅದೃಷ್ಟ ಗಟ್ಟಿಯಾಗಿದೆ ಎಂದಿದ್ದಾರೆ.