ಬೆಂಗಳೂರು : ಕರ್ನಾಟಕ ಲೋಕಸೇವಾ ಆಯೋಗವು 2023-24ನೇ ಸಾಲಿನ ಗೆಜೆಟೆಡ್ ಗ್ರೂಪ್ A ಮತ್ತು B ನ 384 ಹುದ್ದೆಗಳ ನೇಮಕಾತಿ ಪರೀಕ್ಷೆಯನ್ನು ಮುಂದೂಡಿತ್ತು, ಇದೀಗ ಪರೀಕ್ಷೆಗೆ ದಿನಾಂಕ ಮರು ನಿಗದಿ ಪಡಿಸಿದೆ.
2023-24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ ಗ್ರೂಪ್-ಎ ಮತ್ತು ಗ್ರೂಪ್-ಬಿ ವೃಂದದ ಒಟ್ಟು 384 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಗಳಿಗೆ ಅಧಿಸೂಚನೆಗಳನ್ನು ಕ್ರಮವಾಗಿ ದಿನಾಂಕ:26-02-2024 ಮತ್ತು ದಿನಾಂಕ:13-02-2025ರಂದು ಹೊರಡಿಸಲಾಗಿರುತ್ತದೆ. ದಿನಾಂಕ:13-02-20250 :28-03-2025, 29-03-2025, 01-04-2025 02-04-2025ರಂದು ನಡೆಸಲು ನಿಗದಿಪಡಿಸಲಾಗಿತ್ತು. ಕಾರಣಾಂತರಗಳಿಂದ ಮುಖ್ಯಪರೀಕ್ಷೆಯನ್ನು ಮುಂದೂಡಿ, ಪ್ರಕಟಣೆ ಹೊರಡಿಸಲಾಗಿತ್ತು. ಇದೀಗ 03-05-2025, 05-05-2025, 07-05-2025 09-05-2025 ರಂದು ನಡೆಸಲು ಮರುನಿಗದಿಪಡಿಸಲಾಗಿರುತ್ತದೆ.

