ಬೆಂಗಳೂರು : ಸಚಿವ ಜಮೀರ್ ಪುತ್ರ ಝೈದ್ ಖಾನ್ ಅಭಿನಯದ ‘ಕಲ್ಟ್’ ಚಿತ್ರದ ಡ್ರೋನ್ ಟೆಕ್ನಿಶಿಯನ್ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
‘ಕಲ್ಟ್’ ಚಿತ್ರದ ಡ್ರೋನ್ ಟೆಕ್ನಿಶಿಯನ್ ಸಂತೋಷ್ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ಸಂತೋಷ್ ದಿನಕ್ಕೆ 25 ಸಾವಿರ ನಿಗದಿ ಮಾಡಿ ಡ್ರೋನ್ ಶೂಟ್ ಮಾಡುತ್ತಿದ್ದನು. ಆದರೆ ಚಿತ್ರದುರ್ಗದಲ್ಲಿ ಶೂಟಿಂಗ್ ಮಾಡುತ್ತಿದ್ದಾಗ ಡ್ರೋನ್ ಮಿಸ್ ಆಗಿ ವಿಂಡ್ ಫ್ಯಾನ್ ಗೆ ತಗುಲಿದೆ ಎನ್ನಲಾಗಿದೆ. ಪರಿಣಾಮ ಡ್ರೋನ್ ಪುಡಿ ಪುಡಿಯಾಗಿದೆ.
ಇದರ ನಷ್ಟ ಭರಿಸುವಂತೆ ಕಲ್ಟ್’ ಚಿತ್ರದ ಡ್ರೋನ್ ತಂತ್ರಜ್ಞ ಸಂತೋಷ್ ಚಿತ್ರತಂಡವನ್ನು ಕೇಳಿಕೊಂಡಿದ್ದಾನೆ. ಆದರೆ ಚಿತ್ರತಂಡ ಯಾವುದೇ ನಷ್ಟ ಭರಿಸದೇ ಮೆಮೊರಿ ಕಾರ್ಡ್ ಕಿತ್ತುಕೊಂಡಿದೆ ಎಂಬ ಆರೋಪ ಕೇಳಿಬಂದಿದೆ.ನಷ್ಟ ಭರಿಸದ ಚಿತ್ರದ ನಾಯಕ ಜೈದ್ ಖಾನ್ ಹಾಗೂ ನಿರ್ದೇಶಕರ ಮೇಲೆ ಸಂತೋಷ್ ಆರೋಪಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಚಿತ್ರತಂಡ ಮಾಡಿದ ಎಡವಟ್ಟಿನ ಹಿನ್ನೆಲೆ ಈ ಘಟನೆ ನಡೆದಿದೆ. ಅದೃಷ್ಟವಶಾತ್ ಸಂತೋಷ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎನ್ನಲಾಗಿದೆ.ಈ ಸಂಬಂಧ ಮಾಗಡಿ ಪೊಲೀಸ್ ಠಾಣೆಯಲ್ಲಿ ಎನ್ ಸಿ ಆರ್ ದಾಖಲಾಗಿದೆ.