ಬೆಂಗಳೂರು : ಸಿಟಿ ರವಿ ಬಳಸಿದ್ದಾರೆ ಎನ್ನಲಾದ ಅಶ್ಲೀಲ ಪದ ಬಳಕೆ ಪ್ರಕರಣ ಇದೀಗ ರಾಜಕೀಯ ತಿರುವು ಪಡೆದುಕೊಂಡಿದೆ. ಈ ಪ್ರಕರಣವನ್ನು ರಾಜ್ಯಪಾಲರ ಅಂಗಳಕ್ಕೆ ಕೊಂಡೊಯ್ಯಲು ಬಿಜೆಪಿ ನಾಯಕರು ನಿರ್ಧರಿಸಿದ್ದಾರೆ.
ಹೌದು.ಇಂದು ಬಿಜೆಪಿ ನಾಯಕರ ನಿಯೋಗ ರಾಜ್ಯಪಾಲರನ್ನು ಭೇಟಿ ಮಾಡಿ ದೂರು ಸಲ್ಲಿಸಲಿದೆ. ರಾಜ್ಯ ಸರ್ಕಾರ ಹೇಗೆ ಪೊಲೀಸರನ್ನು ಬಳಕೆ ಮಾಡಿಕೊಂಡಿದೆ. ಈ ಪ್ರಕರಣದಲ್ಲಿ ಸರ್ಕಾರ ಹಾಗೂ ಪೊಲೀಸರು ಹೇಗೆ ವರ್ತಿಸಿದ್ದಾರೆ. ಪೊಲೀಸರು ಸಿಟಿ ರವಿಯನ್ನು ಹೇಗೆ..? ಬಳಸಿಕೊಂಡಿದ್ದಾರೆ ಎಂಬ ವಿಚಾರಗಳನ್ನೊಳಗೊಂಡ ದೂರನ್ನು ಇಂದು ಬಿಜೆಪಿ ನಾಯಕರು ರಾಜ್ಯಪಾಲರಿಗೆ ಸಲ್ಲಿಸಲಿದೆ. ವಿಪಕ್ಷ ನಾಯಕ ಆರ್.ಅಶೋಕ್ ಅವರನ್ನೊಳಗೊಂಡ ನಿಯೋಗ ಇಂದು ಸಂಜೆ 5 ಗಂಟೆಗೆ ರಾಜ್ಯಪಾಲ ಗೆಹ್ಲೋಟ್ ರನ್ನು ಭೇಟಿ ಮಾಡಿ ದೂರು ಸಲ್ಲಿಸಲಿದೆ.
ಬಿಜೆಪಿ ಎಂಎಲ್ ಸಿ ಸಿ.ಟಿ.ರವಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಬಗ್ಗೆ ಆಕ್ಷೇಪಾರ್ಹ ಪದ ಬಳಕೆ ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ವಹಿಸಿದೆ. ಸಿಐಡಿಯಿಂದ ನ್ಯಾಯ ಸಿಗಲ್ಲ, ಒತ್ತಡವಿಲ್ಲದೇ ಕೆಲಸ ಮಾಡಿದರೆ ರಕ್ಷಣೆ ಸಿಗಬಹುದು. ಅದನ್ನು ಸಿಐಡಿ ಅಲ್ಲ, ಓರ್ವ ಕಾನ್ಸ್ ಟೇಬಲ್ ಕೂಡ ಮಾಡಬಹುದು. ಆದರೆ ಒತ್ತಡವಿದ್ದಾಗ ಸಿಐಡಿಯಿಂದ ನ್ಯಾಯ ಸಿಗುವಸಾಧ್ಯತೆ ಇಲ್ಲ. ನ್ಯಾಯ ಸಮ್ಮತವಾಗಿದ್ದರೆ ಸಿಐಡಿಗೆ ನೀಡಬೇಕಿರುವ ಅಗತ್ಯವಿಲ್ಲ ಎಂದರು.