ನವದೆಹಲಿ : ‘ಡೀಪ್ ಫೇಕ್’ ವಿಡಿಯೋಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಮುಂದಾಗಿದ್ದು, 7-8 ದಿನಗಳಲ್ಲಿ ಕೇಂದ್ರ ಸರ್ಕಾರದಿಂದ ಕಠಿಣ ಐಟಿ ನಿಯಮ ಜಾರಿಗೆ ಬರಲಿದೆ.
ಹೌದು, ಮುಂದಿನ ಏಳೆಂಟು ದಿನಗಳಲ್ಲಿ ತಿದ್ದುಪಡಿ ಮಾಡಿದ ಐಟಿ ನಿಯಮಗಳನ್ನು ಸರ್ಕಾರ ಹೊರಡಿಸಲಿದೆ ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಮಂಗಳವಾರ ಹೇಳಿದ್ದಾರೆ.ಡೀಪ್ ಫೇಕ್ ತಂತ್ರಜ್ಞಾನದ ಮೂಲಕ ನಟ ನಟಿಯರ ಅಶ್ಲೀಲ ವಿಡಿಯೋ ಎಡಿಟ್ ಮಾಡುತ್ತಿರುವ ಹಲವು ಪ್ರಕರಗಳು ವರದಿಯಾದ ಹಿನ್ನೆಲೆ ಸರ್ಕಾರ ಕಠಿಣ ನಿಯಮ ಜಾರಿಗೆ ಸಿದ್ದತೆ ನಡೆಸಿದೆ.
ನಾವು ಎಲ್ಲಾ ಮಧ್ಯವರ್ತಿಗಳೊಂದಿಗೆ ಎರಡು ಸುತ್ತಿನ ಡಿಜಿಟಲ್ ಇಂಡಿಯಾ ಮಾತುಕತೆ ನಡೆಸಿದ್ದೇವೆ. ಪ್ರಸ್ತುತ ನಿಯಮಗಳ ಬಗ್ಗೆ ನಾವು ಅವರ ಗಮನ ಸೆಳೆದಿದ್ದೇವೆ. ಹೊಸದಾಗಿ ತಿದ್ದುಪಡಿ ಮಾಡಿದ ನಿಯಮಗಳನ್ನು ನಾವು ಸೂಚಿಸುತ್ತೇವೆ ಎಂದು ನಾವು ಹೇಳಿದ್ದೇವೆ” ಎಂದು ಸಚಿವರು ಹೇಳಿದರು. ಮುಂದಿನ ಏಳರಿಂದ ಎಂಟು ದಿನಗಳಲ್ಲಿ ನಾವು ಹೊಸ ತಿದ್ದುಪಡಿ ಮಾಡಿದ ಐಟಿ ನಿಯಮಗಳನ್ನು ಹೊರಡಿಸಲಿದ್ದೇವೆ” ಎಂದು ಐಟಿ ಮತ್ತು ಎಲೆಕ್ಟ್ರಾನಿಕ್ಸ್ ರಾಜ್ಯ ಸಚಿವರನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಗಳು ವರದಿ ಮಾಡಿದೆ.