ಬೆಳಗಾವಿ : ಬೆಳಗಾವಿಯಲ್ಲಿ ಕನ್ನಡಿಗ ಕಂಡಕ್ಟರ್ ಮೇಲೆ ಪೋಕ್ಸೋ ಕೇಸ್ ದಾಖಲಿಸಿಕೊಂಡಿದ್ದ ಸಿಪಿಐ ತಲೆದಂಡವಾಗಿದೆ.
ಎರಡು ದಿನಗಳ ಹಿಂದೆ ಕೆ.ಎಸ್.ಆರ್ ಟಿ.ಸಿ ಬಸ್ ನಲ್ಲಿ ಟಿಕೆಟ್ ಕೊಡುವ ವೇಳೆ ಕಂಡಕ್ಟರ್ ಮಹದೇವಪ್ಪ ತನಗೆ ಮರಾಠಿ ಬರಲ್ಲ ಕನ್ನಡದಲ್ಲಿ ಮಾತನಾಡಿ ಎಂದು ಹೇಳಿದ್ದಕ್ಕೆ ಬಸ್ ನಲ್ಲಿದ್ದ ಮರಾಠಿ ಪುಂಡರು ಕಂಡಕ್ಟರ್ ಮೇಲೆ ಹಿಗ್ಗಾಮುಗ್ಗಾ ಹಲ್ಲೆ ನಡೆಸಿ, ಮರಾಠಿ ಮಾತನಾಡುವಂತೆ ಒತ್ತಾಯಿಸಿದ್ದರು. ಹಲ್ಲೆಗೊಳಗಾದ ಕಂಡಕ್ಟರ್ ಬಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಮರಾಠಿ ದುರುಳರು ನಿರ್ವಾಹಕನ ವಿರುದ್ಧ ಪಿತೂರಿ ಮಾಡಿ ಪೋಕ್ಸೋ ಪ್ರಕರಣ ದಾಖಲಿಸಿದ್ದರು.
ಕಂಡಕ್ಟರ್ ಮೇಲೆ ಪೋಕ್ಸೋ ಕೇಸ್ ದಾಖಲಿಸಿದ್ದ ಸಿಪಿಐ ಗುರುರಾಜ್ ಕಲ್ಯಾಣಶೆಟ್ಟರ್ ಅವರ ತಲೆದಂಡವಾಗಿದೆ. ಮಾರಿಹಾಳ ಠಾಣೆಯಿಂದ ಬೆಳಗಾವಿಯ ಸಿಸಿಆರ್ ಬಿಗೆ ಗುರುರಾಜ್ ಅವರನ್ನು ವರ್ಗಾವಣೆ ಮಾಡಿ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಆದೇಶ ಹೊರಡಿಸಿದ್ದಾರೆ.