ಗುಜರಾತ್ : ದೇಶದಲ್ಲಿ ಮತ್ತೆ ಮಹಾಮಾರಿ ಕೊರೊನಾ ಸೋಂಕು ಆರ್ಭಟಿಸುತ್ತಿದ್ದು, ಆತಂಕ ಶುರುವಾಗಿದೆ.
ಗುಜರಾತ್ ನಲ್ಲೂ ಕೊರೊನಾ ಸೋಂಕು ಧೃಡವಾಗಿದ್ದು, ಗಾಂಧಿನಗರದಲ್ಲಿ ಇಬ್ಬರಿಗೆ ಪಾಸಿಟಿವ್ ಬಂದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆ ಗುಜರಾತ್ ನಲ್ಲೂ ಕೂಡ ಆರೋಗ್ಯ ಇಲಾಖೆ ಮುಂಜಾಗೃತಾ ಕ್ರಮ ಕೈಗೊಂಡಿದೆ.
ದೇಶಾದ್ಯಂತ ಮಹಾಮಾರಿ ಕೋವಿಡ್ ಅಟ್ಟಹಾಸ ಹೆಚ್ಚುತ್ತಿದೆ. ಅದರಲ್ಲಿಯೂ ಕೇರಳದಲ್ಲಿ ಕೋವಿಡ್ ದಿನದಿಂದ ದಿನಕ್ಕೆ ವ್ಯಾಪಕವಾಗಿ ಹರಡುತ್ತಿದೆ. 24 ಗಂಟೆಯಲ್ಲಿ 127 ಜನರಲ್ಲಿ ಕೊರೊನಾ ಸೋಂಕು ಹೊಸದಾಗಿ ಪತ್ತೆಯಾಗಿದೆ.