ಬೆಳಗಾವಿ : ಸಾಲಗಾರರ ಕಾಟ ತಾಳಲಾರದೇ ತನ್ನದೇ ಪಿಕಪ್ ವಾಹನಕ್ಕೆ ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿಯ ಬೈಲಹೊಂಗಲ ಪಟ್ಟಣದ ಮಾರುತಿ ಗಲ್ಲಿಯಲ್ಲಿ ನಡೆದಿದೆ.
38 ವರ್ಷದ ರಫೀಕ್ ಎಂಬುವವರು ತಮ್ಮದೇ ಪಿಕಪ್ ವಾಹನಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪಿಕಪ್ ವಾಹನ ಖರೀದಿಸಲು 6 ಲಕ್ಷ ಸಾಲ ಮಾಡಿಕೊಂಡಿದ್ದ ರಫೀಕ್ ಸಾಲಗಾರರ ಕಿರುಕುಳ ತಾಳಲಾರದೇ ಬೇಸತ್ತು ನಿನ್ನೆ ರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.