alex Certify BREAKING : ಹಾಸನದಲ್ಲಿ ‘ಕಾಂಗ್ರೆಸ್’ ಶಕ್ತಿ ಪ್ರದರ್ಶನ ; ಬೃಹತ್ ‘ಜನಕಲ್ಯಾಣ ಸಮಾವೇಶ’ಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ.! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ಹಾಸನದಲ್ಲಿ ‘ಕಾಂಗ್ರೆಸ್’ ಶಕ್ತಿ ಪ್ರದರ್ಶನ ; ಬೃಹತ್ ‘ಜನಕಲ್ಯಾಣ ಸಮಾವೇಶ’ಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ.!

ಹಾಸನ : ಜೆಡಿಎಸ್ ಭದ್ರಕೋಟೆ ಹಾಸನದಲ್ಲಿ ಕಾಂಗ್ರೆಸ್ ತನ್ನ ಶಕ್ತಿ ಪ್ರದರ್ಶಿಸುತ್ತಿದೆ. ಹಾಸನದಲ್ಲಿ ಇಂದು ಆಯೋಜಿಸಲಾದ  ಜನಕಲ್ಯಾಣ  ಸಮಾವೇಶಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು.

ಸಮಾವೇಶದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಸರ್ಕಾರದ ಹಲವು ಸಚಿವರು, ಶಾಸಕರು ಹಾಜರಿದ್ದಾರೆ. ಸಮಾವೇಶದ ಹಿನ್ನೆಲೆ ನಗರದ ಎಲ್ಲಾ ಕಡೆ ಫ್ಲೆಕ್ಸ್ ಗಳು ರಾರಾಜಿಸುತ್ತಿದೆ. ಸಿಎಂ ಅಭಿಮಾನಿಗಳು ಸಿದ್ದರಾಮಯ್ಯರ ಫೋಟೋ ಹಿಡಿದು ಕುಣಿದು ಕುಪ್ಪಳಿಸುತ್ತಿದ್ದಾರೆ.

ಹಾಸನದಲ್ಲಿ ಇಂದು ಕಾಂಗ್ರೆಸ್ ಪಕ್ಷ ಮತ್ತು ಸ್ವಾಭಿಮಾನಿಗಳ ಒಕ್ಕೂಟದ ಜಂಟಿ ಸಹಯೋಗದಲ್ಲಿ ಜನಕಲ್ಯಾಣ ಸಮಾವೇಶವನ್ನು ಆಯೋಜಿಸಲಾಗಿದ್ದು, ನಮ್ಮ ಸರ್ಕಾರದ ಜನಪರ ಕೆಲಸಗಳನ್ನು ಮೆಚ್ಚಿ ನಿರಂತರವಾಗಿ ಆಶೀರ್ವದಿಸುತ್ತಿರುವ ಕರುನಾಡ ಜನತೆಗೆ ಕೃತಜ್ಞತೆ ಅರ್ಪಿಸಲು ಇದೊಂದು ಅಪೂರ್ವ ಘಳಿಗೆ ಎಂದು ಭಾವಿಸುತ್ತೇನೆ. ನಾಡಿನ ಪ್ರತಿಯೊಬ್ಬ ವ್ಯಕ್ತಿಯನ್ನು ಸ್ವಾವಲಂಬಿ ಮತ್ತು ಸ್ವಾಭಿಮಾನಿಯಾಗಿಸುವುದು ಕಾಂಗ್ರೆಸ್ ಪಕ್ಷದ ಉದ್ದೇಶ. ನುಡಿದಂತೆ ನಡೆದು, ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದ್ದು ಕೂಡಾ ಅದೇ ಕಾರಣಕ್ಕೆ. ಇದು ಕೇವಲ ಸಮಾವೇಶವಲ್ಲ, ಕಾಂಗ್ರೆಸ್ ಪಕ್ಷದ ಆಶಯಗಳ ಸಂಭ್ರಮ. ಬನ್ನಿ, ಈ ಸಂಭ್ರಮದಲ್ಲಿ ಎಲ್ಲರೂ ಪಾಲ್ಗೊಳ್ಳೋಣ ಎಂದು ಸಿಎಂ ಮನವಿ ಮಾಡಿದ್ದಾರೆ.

 

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...