
ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿನ್ನೆ ಐತಿಹಾಸಿಕ 14 ಬಜೆಟ್ ಮಂಡನೆ ಮಾಡಿದ್ದು, ಇದೀಗ ಅವರ ಆರೋಗ್ಯದಲ್ಲಿ ಸಮಸ್ಯೆಯಾಗಿದ್ದು, ಯಾರನ್ನೂ ಭೇಟಿಯಾಗುತ್ತಿಲ್ಲ.
ಹೌದು, ಸಿಎಂ ಸಿದ್ದರಾಮಯ್ಯ ಆರೋಗ್ಯದಲ್ಲಿ ಸಮಸ್ಯೆಯಾಗಿದ್ದು, ಶೀತ, ಗಂಟಲು ನೋವಿನಿಂದ ಸಿದ್ದರಾಮಯ್ಯ ಬಳಲುತ್ತಿದ್ದು, ಯಾರನ್ನೂ ಭೇಟಿಯಾಗುತ್ತಿಲ್ಲ. ಯಾವ ಅಧಿಕಾರಿಗಳನ್ನು ಭೇಟಿಯಾಗದೇ ವಾಪಸ್ ಕಳುಹಿಸಲಾಗುತ್ತಿದೆ. ಸಿಎಂ ನಿವಾಸಕ್ಕೆ ಆಗಮಿಸಿದ್ದ ಹಲವು ಇಲಾಖೆಯ ಅಧಿಕಾರಿಗಳು ವಾಪಸ್ ಹೋಗಿದ್ದಾರೆ. ಇಂದಿನ ಸಿಎಂ ಬಹುತೇಕ ಕಾರ್ಯಕ್ರಮಗಳು ರದ್ದು ಮಾಡಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿನ್ನೆ ತಮ್ಮ ದಾಖಲೆಯ 14 ನೇ ಬಾರಿ ಬಜೆಟ್ ಮಂಡನೆ ಮಾಡಿದ್ದಾರೆ. ಈ ವೇಳೆ ಅವರು ಬಜೆಟ್ ಆಯವ್ಯಯ ಓದಿದ ಹಿನ್ನೆಲೆಯಲ್ಲಿ ಗಂಟಲಿನ ಸಮಸ್ಯೆಯಾಗಿದೆ ಎನ್ನಲಾಗಿದೆ.