ಸಿಟ್ರೋಯೆನ್ ಸಿ3 ರನ್ನ ಲೈವ್ ಮತ್ತು ಫೀಲ್ ಅವತರಣಿಕೆಗಳನ್ನು ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಹೊಸ ಟಾಪ್ ಅವತರಣಿಕೆಯು ಹಿಂಬದಿ ವೈಪರ್/ವಾಶರ್, ಎಲೆಕ್ಟ್ರಿಕಲಿ ಅಡ್ಜಸ್ಟಬಲ್ ಓಆರ್‌ವಿಎಂಗಳು, ಬಟನ್ ಸ್ಟಾರ್ಟ್-ಸ್ಟಾಫ್ ಮತ್ತು ಹಿಂಬದಿ ಕ್ಯಾಮೆರಾಗಳನ್ನು ಹೊಂದಿದೆ.
ಅದೇ 1.2 ಲೀಟರ್ ಎನ್‌ಎ ಪೆಟ್ರೋಲ್ ಹಾಗೂ ಮ್ಯಾನುವಲ್ ಟ್ರಾನ್ಸ್‌ಮಿಶನ್‌ನೊಂದಿಗೆ ಟರ್ಬೋ ಪೆಟ್ರೋಲ್ ಎಂಜಿನ್‌ಗಳೊಂದಿಗೆ ಮುಂದುವರೆಯಲಿರುವ ಸಿ3ಯ ಹೊಸ ವರ್ಶನ್‌ಗಳು ಅಲಾಯ್ ಚಕ್ರಗಳು ಮತ್ತು ಚರ್ಮ ಲೇಪಿತ ಸ್ಟಿಯರಿಂಗ್ ಚಕ್ರಗಳೊಂದಿಗೆ ಬರಲಿವೆ. ಸದ್ಯ ಈ ಹ್ಯಾಚ್‌ಬ್ಯಾಕ್‌ನಲ್ಲಿ 10.2 ಟಚ್‌ಸ್ಕ್ರೀನ್ ಇನ್ಫೋಟೇನ್ಮೆಂಟ್ ವ್ಯವಸ್ಥೆ, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ, ಎತ್ತರ ಹೊಂದಿಸಿಕೊಳ್ಳಬಹುದಾದ ಚಾಲಕನ ಆಸನ, ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು ಮತ್ತು ಹಿಂಬದಿ ಪಾರ್ಕಿಂಗ್ ಸೆನ್ಸಾರ್‌ಗಳನ್ನು ನೋಡಬಹುದಾಗಿದೆ.
ಸಿಟ್ರೋಯೆನ್‌ನ ಟಾಪ್ ಎಂಡ್ ’ಶೈನ್’ ವರ್ಶನ್ ಕೂಡಲೇ ಬರಲಿದೆ ಎಂದು ಡೀಲರ್ ಮೂಲಗಳು ತಿಳಿಸಿವೆ. ಈ ಹ್ಯಾಚ್‌ಬ್ಯಾಕ್ ಸದ್ಯ ಲೈವ್ ಮತ್ತು ಫೀಲ್ ವರ್ಶನ್‌ಗಳಲ್ಲಿ ಲಭ್ಯವಿದೆ.
ಟಾಪ್ ಎಂಡ್ ಮಾಡೆಲ್‌ನಲ್ಲಿ 82 ಪಿಎಸ್, 1.2 ಲೀ ಪೆಟ್ರೋಲ್ ಹಾಗೂ 110 ಪಿಎಸ್, 1.2 ಲೀ ಟರ್ಬೋ ಪೆಟ್ರೋಲ್ ಎಂಜಿನ್‌ಗಳನ್ನು ನೀಡಲಾಗಿದೆ. ಸದ್ಯ ಮ್ಯಾನುವಲ್ ಟ್ರಾನ್ಸ್‌ಮಿಶನ್‌ಅನ್ನು ಎಲ್ಲ ಮಾಡೆಲ್‌ಗಳಲ್ಲೂ ನೀಡಲಾಗಿದ್ದು, ಭವಿಷ್ಯದಲ್ಲಿ ಆಟೋಮೆಟಿಕ್ ಟ್ರಾನ್ಸ್‌ಮಿಶನ್‌ಅನ್ನು ನಿರೀಕ್ಷಿಸಬಹುದಾಗಿದೆ.
ಸದ್ಯ ಸಿಟ್ರೋಯೆನ್ ಹ್ಯಾಚ್‌ಬ್ಯಾಕ್‌ಗಳು 6.16 ಲಕ್ಷ ರೂ. ನಿಂದ 8.43 ಲಕ್ಷ ರೂ. (ಎಕ್ಸ್‌ಶೋರೂಂ ದೆಹಲಿ) ವ್ಯಾಪ್ತಿಯ ಬೆಲೆಯಲ್ಲಿ ಸಿಗುತ್ತಿವೆ. ಹ್ಯೂಂಡಾಯ್ ಗ್ರಾಂಡ್ ಐ10 ನಿಯೋಸ್, ಮಾರುತಿ ಸ್ವಿಫ್ಟ್ ಹಾಗೂ ಟಾಟಾ ಪಂಚ್‌ಗಳಿಗೆ ಪ್ರತಿಯಾಗಿ ಸಿಟ್ರೋಯೆನ್ ತನ್ನ ಈ ಮಾಡೆಲ್‌ಗಳನ್ನು ಪರಿಚಯಿಸಿದೆ.