ಕಲಬುರಗಿ : ಶೀಘ್ರದಲ್ಲೇ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯಾಗಲಿದ್ಯಾ..? ಈ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸುಳಿವು ನೀಡಿದ್ದಾರೆ.
ಕಲಬುರಗಿಯಲ್ಲಿ ಮಾತನಾಡಿದ ಅವರು ಒಂದೊಂದು ರಾಜ್ಯಗಳಲ್ಲಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಮಾಡುತ್ತಿದ್ದೇವೆ,ಉಳಿದ ರಾಜ್ಯಗಳಲ್ಲಿ ಕೂಡ ಬದಲಾವಣೆ ಮಾಡುತ್ತೇವೆ . ಇನ್ನೆರಡು ದಿನದಲ್ಲಿ ಮತ್ತೆರಡು ಸ್ಟೇಟ್ ನಲ್ಲಿ ಬದಲಾವಣೆ ಮಾಡುತ್ತೇವೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬೇಟಿಮಾಡಿದ ಜಿ ಪರಮೇಶ್ವರ್
ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರ ಭಾರೀ ಸುದ್ದಿಯಲ್ಲಿದ್ದಾಗಲೆ, ರಾಜ್ಯ ಕಾಂಗ್ರೆಸ್ ವಲಯದಲ್ಲಿ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಈ ಹೊತ್ತಿನಲ್ಲಿ ನಡೆದ ಡಿನ್ನರ್ ಪಾಲಿಟಿಕ್ಸ್ ಬಣ ರಾಜಕೀಯವನ್ನು ಮತ್ತೋಂದು ಆಯಾಮಕ್ಕೆ ತಿರುಗಿಸಿತ್ತು, ಎಲ್ಲವೂ ರಂಪ ರಾಮಾಯಣ ಆಗುತ್ತಿದ್ದ ಹೊತ್ತಿಲ್ಲಿ ಮದ್ಯ ಪ್ರವೇಶಿಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಎಲ್ಲರನ್ನು ಬಾಯಿಮುಚ್ಚಿಸುವ ಕೆಲಸ ಮಾಡಿದ್ದಾರು. ಇದದ ಬಳಿಕ ಗೃಹ ಸಚಿವ ಜಿ ಪರಮೇಶ್ವರ್ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಬೇಟಿಮಾಡಿರುವುದು ಹಲವು ರಾಜಕೀಯಕ್ಕೆ ಕಾರಣವಾಗಿತ್ತು, ಈ ಬಗ್ಗೆ ಸ್ಪಷ್ಟನೆ ನೀಡಿರುವ ಪರಮೇಶ್ವರ್ ನಾನು ಯಾವುದೇ ರಾಜಕೀಯ ವಿಚಾರ ಚರ್ಚೆ ಮಾಡಿಲ್ಲ ಎಂದು ಹೇಳಿದ್ದಾರೆ.