ನವದೆಹಲಿ: ಸಾಂಸ್ಕೃತಿಕ ಸಂಬಂಧಗಳನ್ನು ಆಳಗೊಳಿಸುವ ಮಹತ್ವದ ಕ್ರಮದಲ್ಲಿ, ಹೊಸ ಶಿಕ್ಷಣ ನೀತಿಯ ಅಡಿಯಲ್ಲಿ ಭಾರತದ ಶಾಸ್ತ್ರೀಯ ಭಾಷೆಗಳಲ್ಲಿ ಫಾರ್ಸಿ (ಪರ್ಷಿಯನ್) ಅನ್ನು ಸೇರಿಸಲು ಭಾರತ ಸರ್ಕಾರ ನಿರ್ಧರಿಸಿದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಘೋಷಿಸಿದರು.
ಎರಡು ದಿನಗಳ ಇರಾನ್ ಪ್ರವಾಸದಲ್ಲಿರುವ ಜೈಶಂಕರ್ ಸೋಮವಾರ ಇರಾನ್ ಸಹವರ್ತಿ ಎಚ್ ಅಮೀರ್-ಅಬ್ದೊಲ್ಲಾಹಿಯಾನ್ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜೈಶಂಕರ್. ನಮ್ಮ ಹೊಸ ಶಿಕ್ಷಣ ನೀತಿಯಲ್ಲಿ ಫಾರ್ಸಿಯನ್ನು ಭಾರತದ ಒಂಬತ್ತು ಶಾಸ್ತ್ರೀಯ ಭಾಷೆಗಳಲ್ಲಿ ಒಂದೆಂದು ಸೇರಿಸಲು ಭಾರತ ಸರ್ಕಾರ ನಿರ್ಧರಿಸಿದೆ” ಎಂದು ಜೈಶಂಕರ್ ಹೇಳಿದರು, ಇರಾನ್ ಮತ್ತು ಭಾರತದ ನಡುವಿನ ಸಾಂಸ್ಕೃತಿಕ, ಸಾಹಿತ್ಯಕ ಮತ್ತು ಭಾಷಾ ಸಂಪರ್ಕಗಳನ್ನು ಎತ್ತಿ ತೋರಿಸಿದರು.
ಈ ಮಾನ್ಯತೆಯು ಭಾರತೀಯ ಶೈಕ್ಷಣಿಕ ಚೌಕಟ್ಟಿನೊಳಗೆ ಫಾರ್ಸಿಯ ಶ್ರೀಮಂತ ಪರಂಪರೆಯ ಬಗ್ಗೆ ಹೆಚ್ಚಿನ ತಿಳುವಳಿಕೆ ಮತ್ತು ಮೆಚ್ಚುಗೆಯನ್ನು ಬೆಳೆಸುವ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. 2004 ರಲ್ಲಿ ಶಾಸ್ತ್ರೀಯ ಭಾಷೆಯ ಸ್ಥಾನಮಾನವನ್ನು ಪಡೆದ ಭಾರತದ ಮೊದಲ ಭಾಷೆ ತಮಿಳು. ಸಂಸ್ಕೃತ, ಕನ್ನಡ, ಮಲಯಾಳಂ ಮತ್ತು ಒಡಿಯಾ ಭಾಷೆಗಳನ್ನು ಕೇಂದ್ರ ಸರ್ಕಾರವು ಭಾರತದಲ್ಲಿ ಶಾಸ್ತ್ರೀಯ ಭಾಷೆಗಳೆಂದು ಘೋಷಿಸಿದೆ.