![](https://kannadadunia.com/wp-content/uploads/2022/10/breaking-news-poster-design-template-d020bd02f944a333be71e17e3a38db24_screen-1.jpg)
ಕಲಬುರ್ಗಿ : ಕಲಬುರ್ಗಿಯಲ್ಲಿ ಆರೋಗ್ಯ ಇಲಾಖೆ ನಕಲಿ ಕ್ಲಿನಿಕ್ ಗಳ ಮೇಲೆ ದಾಳಿ ನಡೆಸಿದ್ದು, 109 ನಕಲಿ ವೈದ್ಯರು ಪತ್ತೆಯಾಗಿದ್ದಾರೆ.
ಕಲಬುರಗಿ ಜಿಲ್ಲೆಯ ಹಳ್ಳಿ ಹಳ್ಳಿಗಳಲ್ಲಿ ನಕಲಿ ವೈದ್ಯರ ಹಾವಳಿ ಹೆಚ್ಚಾಗಿದ್ದು, ಆರೋಗ್ಯ ಇಲಾಖೆ ಅಧಿಕಾರಿಗಳು ಖಚಿತ ಮಾಹಿತಿ ಮೇರೆಗೆ ನಕಲಿ ಕ್ಲಿನಿಕ್ಗಳ ಮೇಲೆ ದಾಳಿ ನಡೆಸಿದ್ದಾರೆ.
ಕೆಪಿಎಂಇ ಅನುಮತಿ ಪಡೆಯದೆ ಜನರಿಗೆ ಚಿಕಿತ್ಸೆ ನೀಡುತ್ತಿರು ನಕಲಿ ವೈದ್ಯರಿಗೆ ಆರೋಗ್ಯ ಇಲಾಖೆ ಬಿಸಿ ಮುಟಿಸಿದ್ದು, ಆರೋಗ್ಯ ಇಲಾಖೆ, ತಹಶೀಲ್ದಾರ್, ಪೊಲೀಸ್ ಟೀಂ ರಚಿಸಿಕೊಂಡು ಕಾರ್ಯಾಚರಣೆ ನಡೆಸಲಾಗಿದ್ದು, ಕಲಬುರಗಿ ಜಿಲ್ಲೆಯಲ್ಲಿ 109 ನಕಲಿ ವೈದ್ಯರು ಪತ್ತೆಯಾಗಿದ್ಧಾರೆ.
ಆರೋಗ್ಯ ಇಲಾಖೆ 109 ನಕಲಿ ವೈದ್ಯರನ್ನು ಪತ್ತೆ ಮಾಡಿ 43 ಕ್ಲಿನಿಕ್ಗಳನ್ನ ಬಂದ್ ಮಾಡಿಸಿದ್ದಾರೆ.ಕೆಪಿಎಂಇ ಅನುಮತಿ ಪಡೆಯದೆ ಚಿಕಿತ್ಸೆ ನೀಡ್ತಿರುವ ಆಸ್ಪತ್ರೆಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ.