ಕಲಬುರಗಿ : ಕಲಬುರಗಿಯಲ್ಲಿ ಘೋರ ಘಟನೆ ನಡೆದಿದ್ದು, ವಿದ್ಯುತ್ ಪ್ರವಹಿಸಿ ಬಾಲಕ ಮೃತಪಟ್ಟಿದ್ದಾನೆ.ಮೃತ ಬಾಲಕನನ್ನು ಬಸವನಗರ ನಿವಾಸಿ ಕಮಲ್ ರಾಜ್ (14) ಎಂದು ಗುರುತಿಸಲಾಗಿದೆ.
ಬಸ್ ನಿಲ್ದಾಣದ ಬಳಿ ಡಿವೈಡರ್ ದಾಟುತ್ತಿದ್ದಾಗ ವಿದ್ಯುತ್ ತಂತಿ ಬಾಲಕನಿಗೆ ತಗುಲಿದೆ ಎನ್ನಲಾಗಿದೆ. ಪರಿಣಾಮ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ರಸ್ತೆಯಲ್ಲಿ ವಿದ್ಯುತ್ ಕಂಬ ತುಂಡಾಗಿ ತಂತಿ ಕಬ್ಬಿಣದ ರಾಡ್ ವೊಂದಕ್ಕೆ ಸಿಕ್ಕಿಹಾಕಿಕೊಂಡಿತ್ತು. ಕಬ್ಬಿಣದ ರಾಡ್ ಮುಟ್ಟಿದ್ದರಿಂದ ಬಾಲಕನಿಗೆ ಶಾಕ್ ತಗುಲಿದೆ ಎನ್ನಲಾಗಿದೆ. ಘಟನೆ ಸಂಬಂಧ ಕಲಬುರಗಿ ಪಾಲಿಕೆ ಅಧಿಕಾರಿಗಳ ವಿರುದ್ಧ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ. ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.