ಮುಂಬೈ : ನಗರದಾದ್ಯಂತ ಬಾಂಬ್ ಗಳನ್ನು ಇರಿಸಲಾಗಿದೆ ಎಂದು ಪೊಲೀಸ್ ನಿಯಂತ್ರಣ ಕೊಠಡಿಗೆ ಸಂದೇಶ ಬಂದಿದ್ದು, ನಂತರ ಮುಂಬೈ ಪೊಲೀಸರು ಶುಕ್ರವಾರ ಎಚ್ಚರಿಕೆ ವಹಿಸಿದ್ದಾರೆ.
ಅಪರಿಚಿತ ವ್ಯಕ್ತಿಯೋರ್ವ ಬೆದರಿಕೆ ಸಂದೇಶ ಕಳುಹಿಸಿದ್ದು, ನಗರದ ಆರು ಸ್ಥಳಗಳಲ್ಲಿ ಸ್ಫೋಟಕಗಳನ್ನು ಇರಿಸಲಾಗಿದೆ ಎಂದು ಸಂದೇಶದಲ್ಲಿ ತಿಳಿಸಲಾಗಿದ್ದು, ನಂತರ ಪೊಲೀಸರು ಶೋಧ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ.ಮುಂಬೈನಾದ್ಯಂತ ಕನಿಷ್ಠ ಎಂಟು ಸಂಸ್ಥೆಗಳಿಗೆ ಬಾಂಬ್ ಸ್ಫೋಟದ ಬೆದರಿಕೆಯ ಇಮೇಲ್ ಬಂದಿದೆ.
ಜನವರಿ 24 ರಂದು ಕೂಡ ದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಬಂದಿದ್ದು, ಹೈ ಅಲರ್ಟ್ ಘೋಷಿಸಲಾಯಿತು.