ಮುಂಬೈನಲ್ಲಿ ‘ಹೌಸ್ ಫುಲ್ 5’ ಚಿತ್ರದ ಚಿತ್ರೀಕರಣದಲ್ಲಿ ತೊಡಗಿರುವ ಬಾಲಿವುಡ್ ನಟ ಅಕ್ಷಯ್ ಕುಮಾರ್ ಕಣ್ಣಿಗೆ ಪೆಟ್ಟು ಮಾಡಿಕೊಂಡಿದ್ದಾರೆ.
ಅಕ್ಷಯ್ ಕುಮಾರ್ ಅವರು ಚಿತ್ರದ ಸ್ಟಂಟ್ ಮಾಡುವಾಗ ಕಣ್ಣಿಗೆ ಗಾಯವಾಗಿದೆ.ಶೂಟಿಂಗ್ ವೇಳೆ ನಟನ ಕಣ್ಣಿಗೆ ಗಾಯವಾಗಿದ್ದು, ಚಿಕಿತ್ಸೆ ನೀಡಲಾಗಿದೆ ಎಂದು ವರದಿಯಾಗಿದೆ.
ಅಕ್ಷಯ್ ಸ್ಟಂಟ್ ನಲ್ಲಿ ತೊಡಗಿದ್ದಾಗ ಒಂದು ವಸ್ತು ಅವರ ಕಣ್ಣಿಗೆ ಬಡಿಯಿತು. ಕೂಡಲೇ ನೇತ್ರತಜ್ಞರನ್ನು ತಕ್ಷಣ ಸೆಟ್ ಗೆ ಕರೆಸಲಾಯಿತು, ಅವರು ಕಣ್ಣಿಗೆ ಚಿಕಿತ್ಸೆ ನೀಡಿದರು ಮತ್ತು ವಿಶ್ರಾಂತಿ ಪಡೆಯಲು ಸಲಹೆ ನೀಡಿದರು ಎನ್ನಲಾಗಿದೆ.