ಬೊಲೆರೊ ಪಲ್ಟಿಯಾಗಿ ಮೂವರ ದುರ್ಮರಣಕ್ಕೀಡಾದ ಘಟನೆ ದಾವಣಗೆರೆ ನಗರದ ಹೊರವಲಯದಲ್ಲಿ ತಡರಾತ್ರಿ ನಡೆದಿದೆ.
ಟೈರ್ ಸ್ಪೋಟಗೊಂಡ ಪರಿಣಾಮ ಬೊಲೆರೊ ವಾಹನ ಪಲ್ಟಿಯಾಗಿದ್ದು, ಮೂವರು ಮೃತಪಟ್ಟು, 6 ಜನರಿಗೆ ಗಾಯಗಳಾಗಿದೆ. ಗಾಯಾಳುಗಳನ್ನು ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಈ ಪೈಕಿ ಓರ್ವನ ಸ್ಥಿತಿ ಗಂಭೀರವಾಗಿದೆ. ಮೃತರು ಆಂಧ್ರ ಮೂಲದ ನಿವಾಸಿಗಳು ಎಂದು ಗುರುತಿಸಲಾಗಿದೆ. ಮೆಣಸು ಮಾರಾಟ ಮಾಡಿ ತಮ್ಮ ಊರಿಗೆ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಘಟನೆ ನಡೆದ ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.