ಬೆಂಗಳೂರು : ಬೆಳ್ಳಂ ಬೆಳಗ್ಗೆ ಬೆಂಗಳೂರಲ್ಲಿ ಬಿಎಂಟಿಸಿ ಬಸ್ ಒಂದು ನಿಯಂತ್ರಣ ತಪ್ಪಿ ಡಿವೈಡರ್ ಹತ್ತಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಬನಶಂಕರಿ ಬಸ್ ನಿಲ್ದಾಣದ ಬಳಿ ಈ ಘಟನೆ ನಡೆದಿದೆ. ಬಸ್ ಡಿಪೋದಿಂದ ಬಸ್ ಸ್ಟ್ಯಾಂಡ್ ಕಡೆ ಹೋಗುತ್ತಿದ್ದ ವೇಳೆ ಬಿಎಂಟಿಸಿ ಬಸ್ ನಿಯಂತ್ರಣ ತಪ್ಪಿ ಡಿವೈಡರ್ ಹತ್ತಿದೆ. ಈ ವೇಳೆ ಪ್ರಯಾಣಿಕರು ಇಲ್ಲದೇ ಇದ್ದರಿಂದ ಯಾವುದೇ ಗಾಯ, ನೋವು ಸಂಭವಿಸಿಲ್ಲ.
ಬೆಳ್ಳಂ ಬೆಳಗ್ಗೆ ಈ ಘಟನೆ ಸಂಭವಿಸಿದ್ದರಿಂದ ಹೆಚ್ಚಿನ ವಾಹನ ಸಂದಣಿ ಇರಲಿಲ್ಲ, ಯಾವುದೇ ಅನಾಹುತ ನಡೆಯಲಿಲ್ಲ. ಘಟನೆ ಹಿನ್ನೆಲೆ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು.