ಹಾಸನ : ಹಾಸನ ಜಿಲ್ಲೆಯ ದಾಸರಕೊಪ್ಪಲಿನಲ್ಲಿ ತಾಯಿ ಮತ್ತು ಇಬ್ಬರು ಮಕ್ಕಳ ಹತ್ಯೆ ಪ್ರಕರಣ ಸಂಬಂಧ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿ ವಿಜಯಪುರ ಮೂಲದ ನಿಂಗಪ್ಪ ಕಾಗವಾಡ, ಕಾರು ಚಾಲಕನೆಂದು ಪರಿಚಯ ಮಾಡಿಕೊಂಡು ಹಣಕ್ಕಾಗಿ ಶಿವಮ್ಮ ಹಾಗೂ ಇಬ್ಬರು ಮಕ್ಕಳಾದ ಪವನ್, ಸಿಂಚನಾರನ್ನು ಹತ್ಯೆ ಮಾಡಿ ವಿಜಯಪುರಕ್ಕೆ ಪರಾರಿಯಾಗಿದ್ದ.
ಪ್ರಕರಣದ ತನಿಖೆ ಆರಂಭಿಸಿದ ಪೆನ್ಷನ್ ಮೊಹಲ್ಲಾ ಪೊಲೀಸರು ಆರೋಪಿ ನಿಂಗಪ್ಪನನ್ನು ಬಂಧಿಸಿದ್ದು, ಶಿವಮ್ಮ ಪತಿ ಇಲ್ಲದ ವೇಳೆ ಮೂವರು ಹತ್ಯೆ ಮಾಡಿದ್ದಾನೆ.