ಬೆಂಗಳೂರು : ಬೆಂಗಳೂರಲ್ಲಿ ಒತ್ತುವರಿದಾರರಿಗೆ ಬಿಗ್ ಶಾಕ್ ಎದುರಾಗಿದ್ದು, ಬೆಂಗಳೂರಲ್ಲಿ 100 ಕ್ಕೂ ಮನೆಗಳನ್ನು ನೆಲಸಮ ಮಾಡಲಾಗಿದೆ.
ಬೆಂಗಳೂರಿನ ಕಾಡುಬೀಸನಹಳ್ಳಿಯಲ್ಲಿ ಒತ್ತುವರಿದಾರರಿಗೆ ಬಿಗ್ ಶಾಕ್ ನೀಡಿರುವ ಕೆಐಡಿಬಿ 100 ಕ್ಕೂ ಮನೆಗಳನ್ನು ನೆಲಸಮ ಮಾಡಿದೆ.
ಬೆಳಗ್ಗೆಯಿಂದಲೇ ಜೆಸಿಬಿಗಳ ಘರ್ಜನೆ ಆರಂಭವಾಗಿದ್ದು, ಯಾವುದೇ ನೋಟಿಸ್ ನೀಡದೇ ಮನೆ, ಶೆಡ್ ಗಳನ್ನು ಪುಡಿ ಪುಡಿ ಮಾಡಿದೆ. ಮನೆಗಳನ್ನು ನೆಲಸಮ ಮಾಡಿದ್ದಕ್ಕೆ ಜನರು ತೀವ್ರ ಆಕ್ರೋಶ ಹೊರ ಹಾಕಿದ್ದಾರೆ. ನೋಟಿಸ್ ನೀಡದೇ ಮನೆಗಳನ್ನು ನೆಲಸಮ ಮಾಡಿದ್ದಾರೆ. ಮನೆ ಒಡೆಯುವ ಮುನ್ನ ವಿಷಯ ತಿಳಿಸಿಲ್ಲ, ನೋಟಿಸ್ ನೀಡಿಲ್ಲ ಜನರು ಗಲಾಟೆ ಮಾಡಿದ್ದಾರೆ. ಪೊಲೀಸರು ಹಾಗೂ ನಿವಾಸಿಗಳ ನಡುವೆ ವಾಗ್ವಾದ ಕೂಡ ನಡೆದಿದೆ.