ಡಿಜಿಟಲ್ ಡೆಸ್ಕ್ : ಆಭರಣ ಪ್ರಿಯರಿಗೆ ಬಿಗ್ ಶಾಕ್ ಎದುರಾಗಿದ್ದು, ಚಿನ್ನ ಹಾಗೂ ಬೆಳ್ಳಿ ಬೆಲೆ ಮತ್ತೆ ಏರಿಕೆಯಾಗಿದೆ.
ಆಭರಣ ಚಿನ್ನದ ಬೆಲೆ ಗ್ರಾಂಗೆ 60 ರೂ ಏರಿಕೆಯಾಗಿದೆ ಹಾಗೂ ಬೆಳ್ಳಿ ಬೆಲೆ ನಿನ್ನೆ ಗ್ರಾಂಗೆ 2 ರೂ ಏರಿಕೆ ಆಗಿದ್ದರೆ ಇಂದು 1 ರೂ ಹೆಚ್ಚಳವಾಗಿದೆ.
22 ಕ್ಯಾರಟ್ ಆಭರಣ ಚಿನ್ನದ ಬೆಲೆ 7,450 ರೂ.ಗೆ ಏರಿದೆ. 24 ಕ್ಯಾರಟ್ ನ ಅಪರಂಜಿ ಚಿನ್ನದ ಬೆಲೆ 81,270 ರೂ ಆಗಿದೆ. 100 ಗ್ರಾಂ ಬೆಳ್ಳಿ ಬೆಲೆ 9,650 ರೂ ಇದೆ.
ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 74,500 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಂಗೆ 9,650 ಇದೆ.
ಬೆಂಗಳೂರಿನಲ್ಲಿ 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 74,500 ರೂ, 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 81,270 ರೂ, ಬೆಳ್ಳಿ ಬೆಲೆ 10 ಗ್ರಾಂಗೆ: 965 ರೂ ಇದೆ.