ಮಹಾರಾಷ್ಟ್ರದಲ್ಲಿ ಲೋಕಸಭಾ ಚುನಾವಣೆಯಲ್ಲಿ ಕಳಪೆ ಪ್ರದರ್ಶನದ ನಂತರ, ಅಜಿತ್ ಪವಾರ್ ನೇತೃತ್ವದ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್ಸಿಪಿ) ರಾಜಕೀಯ ಸವಾಲುಗಳನ್ನು ಎದುರಿಸುತ್ತಿದೆ.
ಪಿಂಪ್ರಿ-ಚಿಂಚ್ವಾಡ್ ನ ನಾಲ್ವರು ಉನ್ನತ ನಾಯಕರು ರಾಜೀನಾಮೆ ನೀಡಿ ಹಿರಿಯ ನಾಯಕ ಶರದ್ ಪವಾರ್ ನೇತೃತ್ವದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷಕ್ಕೆ ಸೇರಲು ಸಜ್ಜಾಗಿದ್ದರಿಂದ ಅಜಿತ್ ಪವಾರ್ ಅವರ ಪಕ್ಷಕ್ಕೆ ಮಂಗಳವಾರ ದೊಡ್ಡ ಹಿನ್ನಡೆಯಾಗಿದೆ.
ಪಿಂಪ್ರಿ-ಚಿಂಚ್ವಾಡ್ ಘಟಕದ ಅಧ್ಯಕ್ಷ ಅಜಿತ್ ಗವಾನೆ, ವಿದ್ಯಾರ್ಥಿ ನಾಯಕ ಯಶ್ ಸಾನೆ ಮತ್ತು ಇಬ್ಬರು ಮಾಜಿ ಕಾರ್ಪೊರೇಟರ್ಗಳಾದ ರಾಹುಲ್ ಭೋಸಲೆ ಮತ್ತು ಪಂಕಜ್ ಭಲೇಕರ್ ಅವರು ಎನ್ ಸಿ ಪಿ ಪಕ್ಷಕ್ಕೆ ಗುಡ್ ಬೈ ಹೇಳಿದ್ದಾರೆ. ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಅಜಿತ್ ಪವಾರ್ ಬಣದ ಕೆಲವು ನಾಯಕರು ಶರದ್ ಪವಾರ್ ಬಣಕ್ಕೆ ಮರಳಲು ಸಿದ್ಧರಿದ್ದಾರೆ ಎಂಬ ಊಹಾಪೋಹಗಳ ಮಧ್ಯೆ ಈ ರಾಜೀನಾಮೆಗಳು ಬಂದಿವೆ.