ಬೆಂಗಳೂರು : ನಟ ದರ್ಶನ್’ ಗೆ ಬಿಗ್ ಶಾಕ್ ಎದುರಾಗಿದ್ದು, ರೇಣುಕಾಸ್ವಾಮಿ ಕೊಲೆ ಕೇಸ್ ಮುಗಿಯೋತನಕ ಗನ್ ಮುಟ್ಟಂಗಿಲ್ಲ ಎಂದು ಪೊಲೀಸರು ಖಡಕ್ ಸೂಚನೆ ನೀಡಿ ಗನ್ ಲೈಸೆನ್ಸ್ ಅಮಾನತು ಮಾಡಿದ್ದಾರೆ.
ಗನ್ ಲೈಸೆನ್ಸ್ ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನಿಸಿದ ನಟ ದರ್ಶನ್ ಗೆ ಕೊನೆಗೂ ನಿರಾಸೆಯಾಗಿದೆ. ದರ್ಶನ್ ಗನ್ ಲೈಸೆನ್ಸ್ ತಾತ್ಕಾಲಿಕವಾಗಿ ಅಮಾನತು ಮಾಡಲಾಗಿದೆ.
ನನಗೆ ಗನ್ ಬೇಕು, ಲೈಸೆನ್ಸ್ ರದ್ದು ಮಾಡಬೇಡಿ ಎಂದು ಪೊಲೀಸರಿಗೆ ನಟ ದರ್ಶನ್ ಮನವಿ ಮಾಡಿದ್ದರು. ಪೊಲೀಸರ ನೋಟಿಸ್ ಗೆ ಉತ್ತರ ನೀಡಿದ ನಟ ದರ್ಶನ್ ನಾನು ಸೆಲೆಬ್ರಿಟಿ, ಹೊರಗಡೆ ಹೋದಾಗ ಸುರಕ್ಷತೆಗೆ ಗನ್ ಬೇಕಾಗುತ್ತದೆ. ನನಗೆ ಗನ್ ಬೇಕು, ಲೈಸೆನ್ಸ್ ರದ್ದು ಮಾಡಬೇಡಿ ಎಂದು ಪೊಲೀಸರಿಗೆ ನಟ ದರ್ಶನ್ ಪತ್ರದ ಮೂಲಕ ಮನವಿ ಮಾಡಿದ್ದರು.
ರೇಣುಕಾಸ್ವಾಮಿ ಕೊಲೆ ಕೇಸ್ ವಿಚಾರಣೆ ಮುಗಿಯೋತನಕ ಗನ್ ಬಳಸುವ ಹಾಗಿಲ್ಲ. ಈ ಕೂಡಲೇ ಗನ್ ಸರೆಂಡರ್ ಮಾಡಲು ಸೂಚನೆ ನೀಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಆರ್ ಆರ್ ನಗರ ಠಾಣೆಯ ಪೊಲೀಸರಿಗೆ ಸೂಚನೆ ನೀಡಲಾಗಿದ್ದು, ದರ್ಶನ್ ಬಳಿಯಿರುವ 2 ಗನ್ ಗಳನ್ನು ವಶಕ್ಕೆ ಪಡೆಯಲು ಪೊಲೀಸರಿಗೆ ಸೂಚನೆ ನೀಡಲಾಗಿದೆ.