ನವದೆಹಲಿ : ರಾಹುಲ್ ಗಾಂಧಿ ಸಾರಥ್ಯದ ‘ಭಾರತ್ ನ್ಯಾಯ ಯಾತ್ರೆ’ 2.0 ಜನವರಿ 14 ರಿಂದ ಆರಂಭವಾಗಲಿದೆ ಎಂದು ತಿಳಿದು ಬಂದಿದೆ. ಹೌದು. ಈ ಬಾರಿ ಭಾರತ್ ಜೋಡೋ ಯಾತ್ರೆಗೆ ‘ಭಾರತ್ ನ್ಯಾಯ ಯಾತ್ರೆ’ ಎಂದು ನಾಮಕರಣ ಕೂಡ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಲೋಕಸಭೆ ಚುನಾವಣೆಗೆ ಭರ್ಜರಿ ತಯಾರಿ ನಡೆಸುತ್ತಿರುವ ಕಾಂಗ್ರೆಸ್ ಚುನಾವಣೆಗೂ ಮುನ್ನ ದೇಶದ ಹಲವು ರಾಜ್ಯಗಳಲ್ಲಿ ‘ನ್ಯಾಯ ಯಾತ್ರೆ‘ ನಡೆಸುವ ಮೂಲಕ ಭರ್ಜರಿ ಪ್ರಚಾರ ನಡೆಸಲಿದೆ. ಈ ಬಾರಿ ಯಾತ್ರೆ 14 ರಾಜ್ಯಗಳಲ್ಲಿ ಸಂಚರಿಸಲಿದೆ ಎಂದು ತಿಳಿದು ಬಂದಿದೆ.
ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಜನವರಿ 14 ರಿಂದ ಪ್ರಾರಂಭವಾಗುವ ಭಾರತ್ ಜೋಡೋ ಯಾತ್ರೆಯ ಎರಡನೇ ಆವೃತ್ತಿಗೆ ಚಾಲನೆ ನೀಡಲಿದ್ದಾರೆ. ‘ಭಾರತ್ ನ್ಯಾಯ್ ಯಾತ್ರಾ’ ಎಂದು ಮರುನಾಮಕರಣ ಮಾಡಲಾದ ಈ ಮೆರವಣಿಗೆಯು ಈಶಾನ್ಯದ ಮಣಿಪುರದಿಂದ ಪ್ರಾರಂಭವಾಗಿ ಮಹಾರಾಷ್ಟ್ರದ ಮುಂಬೈನಲ್ಲಿ ಕೊನೆಗೊಳ್ಳುವ ದೇಶದ ಪೂರ್ವದಿಂದ ಪಶ್ಚಿಮ ಭಾಗವನ್ನು ಒಳಗೊಂಡಿದೆ.
ರಾಹುಲ್ ಗಾಂಧಿ ಅವರ ಭಾರತ್ ನ್ಯಾಯ್ ಯಾತ್ರೆಯಲ್ಲಿ 14 ರಾಜ್ಯಗಳು 6,000 ಕಿಲೋಮೀಟರ್ ಗಿಂತಲೂ ಹೆಚ್ಚು ದೂರವನ್ನು ಕ್ರಮಿಸಲಿವೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಜನವರಿ 14 ರಂದು ಮಣಿಪುರದಿಂದ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ.