![](https://kannadadunia.com/wp-content/uploads/2021/02/Bangalore-Metro-Rail-Corporation-Ltd.jpg)
ಬೆಂಗಳೂರು : ಬೆಂಗಳೂರಿನ ಮೆಟ್ರೋ ಸಂಚಾರದಲ್ಲಿ ಮತ್ತೆ ವ್ಯತ್ಯಯವಾಗಿದ್ದು, ಪ್ರಯಾಣಿಕರು ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ.
ಬೆಂಗಳೂರಿನ ಎಂ.ಜಿ .ರಸ್ತೆ-ಬೈಯಪ್ಪನಹಳ್ಳಿ ನಡುವಿನ ಸಂಚಾರದಲ್ಲಿ ವ್ಯತ್ಯಯವುಂಟಾಗಿದೆ. ತಾಂತ್ರಿಕ ದೋಷದಿಂದ ಮೆಟ್ರೋ ಸಂಚಾರ ಸ್ಥಗಿತವಾಗಿದ್ದು,ಪ್ರಯಾಣಿಕರು ಪರದಾಡುವಂತಾಗಿದೆ. ಎಂ.ಜಿ ರೋಡ್- ಬೈಯಪ್ಪನ ಹಳ್ಳಿ, ಚಲ್ಲಘಟ್ಟ-ಎಂಜಿ ರೋಡ್ ಮಾರ್ಗದಲ್ಲಿ ಈ ಅಡಚಣೆ ಉಂಟಾಗಿದ್ದು, 1 ಗಂಟೆಯೊಳಗೆ ಸಮಸ್ಯೆ ಬಗೆಹರಿಸುವುದಾಗಿ ಮೆಟ್ರೋ ತಿಳಿಸಿದೆ.