ಬೆಂಗಳೂರು : ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಆರೋಪಿಯ ಚಹರೆ ಪತ್ತೆಯಾಗಿದೆ.
ಬಾಂಬ್ ಸ್ಪೋಟ ಪ್ರಕರಣ ತನಿಖೆ ನಡೆಸುತ್ತಿರುವ ಪೊಲೀಸರು ಇದೀಗ ಸಿಸಿಟಿವಿಯಲ್ಲಿ ಶಂಕಿತ ಆರೋಪಿಯ ಚಲವಲನಗಳನ್ನು ಗಮನಿಸಿದ್ದಾರೆ. ಆರೋಪಿ ಟೋಪಿ ಹಾಕಿಕೊಂಡಿದ್ದು, ಕಪ್ಪು ಬಣ್ಣದ ಮಾಸ್ಕ್ ಜೊತೆಗೆ ಬ್ಯಾಗ್ ಹಾಕಿಕೊಂಡು ಬಾಂಬ್ ಇಟ್ಟು ಪರಾರಿಯಾಗಿದ್ದಾನೆ.
ಆರೋಪಿ ರಾಮೇಶ್ವರಂ ಕೆಫೆ ಬಂದು ರವಿ ಇಡ್ಲಿ ಆರ್ಡರ್ ಮಾಡಿ ಅದನ್ನು ತಿಂದು ಬಳಿಕ ಅಲ್ಲೇ ಬಾಂಬ್ ಇಟ್ಟು ಹೋಗಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ. ಹಲವಾರು ಜನರು ಗಾಯಗೊಂಡ ಸ್ಫೋಟಕ್ಕೆ ಕಾರಣವಾದ ಆರೋಪಿಯನ್ನು ಸಿಸಿಟಿವಿ ದೃಶ್ಯಾವಳಿಗಳ ಮೂಲಕ ಗುರುತಿಸಲಾಗಿದೆ. ಸದ್ಯ ಆರೋಪಿಯ ಗುರುತು ಪತ್ತೆಯಾಗಿದ್ದು, ಯುಎಪಿಎ ಮತ್ತು ಸ್ಫೋಟಕ ವಸ್ತುಗಳ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.