alex Certify BREAKING : ಬೆಂಗಳೂರಿನಲ್ಲಿ ಗ್ರೇನೇಡ್ ಪತ್ತೆ ಪ್ರಕರಣ : ಶಂಕಿತ ಉಗ್ರ ಜುನೈದ್ ಸಹಚರ ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ಬೆಂಗಳೂರಿನಲ್ಲಿ ಗ್ರೇನೇಡ್ ಪತ್ತೆ ಪ್ರಕರಣ : ಶಂಕಿತ ಉಗ್ರ ಜುನೈದ್ ಸಹಚರ ಅರೆಸ್ಟ್

ಬೆಂಗಳೂರು : ಬೆಂಗಳೂರಿನ ಮನೆಯಲ್ಲಿ ಗ್ರೆನೇಡ್ ಗಳ ಪತ್ತೆ ಪ್ರಕರಣ ಸಂಬಂಧ ಇದೀಗ ಪೊಲೀಸರು ಪ್ರಮುಖ ಆರೋಪಿ, ಶಂಕಿತ ಉಗ್ರನ ಸಹಚರನನ್ನು ಬಂಧಿಸಿದ್ದಾರೆ.

ಶಂಕಿತ ಉಗ್ರ ಜುನೈದ್ ನ ಸಹಚರನಾಗಿರುವ ಮೊಹಮ್ಮದ್ ಅರ್ಷದ್ ಖಾನ್ ನನ್ನು ಇಂದು ಆರ್ ಟಿ ನಗರ ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಐವರು ಶಂಕಿತ ಉಗ್ರರನ್ನು ಬಂಧಿಸಿದ್ದ ಪೊಲೀಸರು ವಿಚಾರಣೆ ವೇಳೆ ಹಲವು ಸ್ಪೋಟಕ ಮಾಹಿತಿಗಳು ಬಹಿರಂಗವಾಗಿದ್ದವು, ಇದರ ಪೈಕಿ ಜುನೈದ್ ಸಹಚರ ಅರ್ಷದ್ ಖಾನ್ ನಾಪತ್ತೆಯಾಗಿದ್ದ. ವಿವಿಧ ಹಂತಗಳಲ್ಲಿ ಕಾರ್ಯಾಚರಣೆ ನಡೆಸಿದ್ದ ಪೊಲೀಸರು ಇಂದು ಆರೋಪಿಯನ್ನು ಬಂಧಿಸಿದ್ದಾರೆ.

ಕಳೆದ ನಾಲ್ಕು ವರ್ಷಗಳಿಂದ ಆರೋಪಿ ಮೊಹಮ್ಮದ್ ಅರ್ಷದ್ ತಲೆಮರೆಸಿಕೊಂಡಿದ್ದು, ಈತನ ಮೇಲೆ 17 ಪ್ರಕರಣಗಳು ದಾಖಲಾಗಿದ್ದವು, ಇಂದು ಆರ್.ಟಿ.ನಗರ ಪೊಲೀಸರು ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...