ಬೆಳಗಾವಿ : ಲಡಾಖ್ ನಲ್ಲಿ ಗುಡ್ಡ ಕುಸಿದು ಬೆಳಗಾವಿ ಮೂಲದ ಯೋಧರೊಬ್ಬರು ಹುತಾತ್ಮರಾಗಿದ್ದಾರೆ.
ಲಡಾಖ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸೈನಿಕ ಮಹೇಶ್ ಡಿ.14 ರಂದು ಗುಡ್ಡ ಕುಸಿದು ಮೃತಪಟ್ಟಿದ್ದರು. ಸೇನಾ ಸಿಬ್ಬಂದಿ ಕಾರ್ಯಾಚರಣೆ ಮಾಡಿ ಶವ ಹೊರತೆಗೆದಿದ್ದರು.ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಇರಣಟ್ಟಿ ಗ್ರಾಮದವರು. ಜಮ್ಮು-ಕಾಶ್ಮೀರ ಲೇಹ ಗಡಿ ಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹೇಶ್ ವೀರಮರಣವನ್ನಪ್ಪಿದ್ದಾರೆ.
ನಿನ್ನೆ ಬೆಳಗಾವಿಗೆ ಯೋಧನ ಪಾರ್ಥಿವ ಶರೀರ ಆಗಮಿಸಿದ್ದು, ಸಕಲ ಸರ್ಕಾರಿ ಗೌರವಗಳೊಂದಿಗೆ ಇಂದು ಅಂತ್ಯಕ್ರಿಯೆ ನೆರವೇರಲಿದೆ.2 ತಿಂಗಳ ಹಿಂದೆಯಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿದ್ದ ಮಹೇಶ್ ಕೆಲವು ದಿನಗಳಲ್ಲಿ ಮದುವೆಯಾಗಲಿದ್ದರು. ಆದರೆ ಲಡಾಖ್ ನಲ್ಲಿ ನಡೆದ ದುರಂತದಲ್ಲಿ ಮಹೇಶ್ ಪ್ರಾಣ ತೆತ್ತಿದ್ದಾರೆ.