alex Certify BREAKING : ಬೆಂಗಳೂರಲ್ಲಿ ‘ಬೆಡ್ ಶೀಟ್ ಗ್ಯಾಂಗ್’ ನಿಂದ ‘ATM’ ಗೆ ಕನ್ನ ; 16 ಲಕ್ಷ ಹಣ ದೋಚಿ ಪರಾರಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ಬೆಂಗಳೂರಲ್ಲಿ ‘ಬೆಡ್ ಶೀಟ್ ಗ್ಯಾಂಗ್’ ನಿಂದ ‘ATM’ ಗೆ ಕನ್ನ ; 16 ಲಕ್ಷ ಹಣ ದೋಚಿ ಪರಾರಿ..!

ಬೆಂಗಳೂರು : ‘ಬೆಡ್ ಶೀಟ್ ಗ್ಯಾಂಗ್’ ಒಂದು ಗ್ಯಾಸ್ ಕಟರ್ ಬಳಸಿ ಎಟಿಎಂ ನಲ್ಲಿ ಹಣ ದರೋಡೆ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಒಂದೇ ದಿನ ಬೆಳ್ಳಂದೂರು, ಹೊಸೂರಿನ ಎಟಿಎಂ ನಲ್ಲಿ ಈ ಘಟನೆ ನಡೆದಿದೆ. ಬೆಡ್ ಶೀಟ್ ಸುತ್ತಿಕೊಂಡು ಬಂದ ಗ್ಯಾಂಗ್ ಎಟಿಎಮ್ ನ ಸಿಸಿ ಕ್ಯಾಮೆರಾಗೆ ಬ್ಲಾಕ್ ಸ್ಪ್ರೇ ಹೊಡೆದು 16,56,800 ರೂ ಹಣ ದರೋಡೆ ಮಾಡಿದೆ. ದುಷ್ಕರ್ಮಿಗಳ ಕೃತ್ಯ ಎಟಿಎಮ್ ನ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಹೊರ ರಾಜ್ಯದಿಂದ ಬಂದು ಹಣ ದರೋಡೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಬೆಳ್ಳಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಖದೀಮರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

 

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...