ಬೆಂಗಳೂರು : ಬಿಜೆಪಿಯ ನೂತನ ರಾಜ್ಯಾಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ಇಂದು ರಾಜ್ಯಾಧ್ಯಕ್ಷರ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದ್ದಾರೆ.
ಹೋಮ, ಹವನ ವಿಶೇಷ ಪೂಜೆಯೊಂದಿಗೆ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ನಳಿನ್ ಕುಮಾರ್ ಕಟೀಲು ಅವರು ವಿಜಯೇಂದ್ರಗೆ ಅಧಿಕಾರ ಹಸ್ತಾಂತರಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಮಾಜಿ ಸಚಿವರಾದ ಅಶೋಕ್, ಗೋವಿಂದ ಕಾರಜೋಳ, ಮುನಿರತ್ನ, ಆರಗ ಜ್ಞಾನೇಂದ್ರ, ಶ್ರೀರಾಮುಲು, ಗೋಪಾಲಯ್ಯ, ಪ್ರಭು ಚೌಹಾಣ್, ಸಂಸದರಾದ ರಾಘವೇಂದ್ರ, ತೇಜಸ್ವಿ ಸೂರ್ಯ ಸೇರಿ ಮತ್ತಿತರರು ಭಾಗಿಯಾಗಿದ್ದರು.ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿತ್ತು, ವಿಜಯೇಂದ್ರಗೆ ಜಯವಾಗಲಿ, ಜೈ ವಿಜಯೇಂದ್ರ ಎಂಬ ಘೋಷಣೆಗಳು , ಶಿಳ್ಳೆ ಚಪ್ಪಾಳೆಗಳ ಶಬ್ಬ ಮುಗಿಲು ಮುಟ್ಟಿತ್ತು.