ಬೆಂಗಳೂರು : ಸಚಿವ ಕೆ.ಎನ್ ರಾಜಣ್ಣರ ಪುತ್ರ ರಾಜೇಂದ್ರ ಅವರ ಕೊಲೆಗೆ ಯತ್ನ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ದೂರು ದಾಖಲಾಗಿದೆ.
ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಮೋಹನ್ ಅವರಿಗೆ ರಾಜೇಂದ್ರ ರಾಜಣ್ಣ ಲಿಖಿತವಾಗಿ ದೂರು ನೀಡಿದ್ದು, ನಾಳೆ ತುಮಕೂರು ಎಸ್ಪಿಗೆ ದೂರು ನೀಡಲಿದ್ದಾರೆ.
ನವೆಂಬರ್ 16 ರಂದು ನನ್ನ ಮಗಳ ಹುಟ್ಟು ಹಬ್ಬದ ಕಾರ್ಯಕ್ರಮವಿತ್ತು. ಅದರ ಹಿಂದಿನ ಶಾಮಿಯಾನ ಹಾಕುವ ನೆಪದಲ್ಲಿ ಬಂದಿದ್ದ ಕೆಲವರು ನನ್ನ ಮೇಲೆ ಕೊಲೆ ಮಾಡಲು ಅಥವಾ ಹಲ್ಲೆ ನಡೆಸಲು ಸಂಚು ರೂಪಿಸಿದ್ದರು, ಆದರೆ ಅದು ಆಗಲಿಲ್ಲ ಎಂದಿದ್ದಾರೆ. ನನ್ನ ಮೇಲೆ ಯಾವುದೇ ರೀತಿಯ ಹನಿಟ್ರ್ಯಾಪ್ ನಡೆದಿಲ್ಲ. ಅಂತಹ ಪ್ರಯತ್ನಗಳೂ ಆಗಿಲ್ಲ, ಕೊಲೆ ಯತ್ನ ಮಾತ್ರ ನಡೆದಿದೆ ಎಂದರು.