ನವದೆಹಲಿ : ಏಷ್ಯನ್ ಒಳಾಂಗಣ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ಮೊದಲ ದಿನವಾದ ಶನಿವಾರ ಹರ್ಮಿಲನ್ ಕೌರ್ ಬೈನ್ಸ್ ಮತ್ತು ಜ್ಯೋತಿ ಯರ್ರಾಜಿ ತಮ್ಮ ತಮ್ಮ ವಿಭಾಗಗಳಲ್ಲಿ ವೈಯಕ್ತಿಕ ಚಿನ್ನದ ಪದಕಗಳನ್ನು ಗೆಲ್ಲುವ ಮೂಲಕ ಭಾರತಕ್ಕೆ ಉತ್ತಮ ಆರಂಭ ಒದಗಿಸಿದ್ದಾರೆ.
ಟೆಹ್ರಾನ್ ನಲ್ಲಿ ನಡೆದ ಮಹಿಳೆಯರ 1500 ಮೀಟರ್ ಓಟದಲ್ಲಿ ಬೈನ್ಸ್ ಮೊದಲ ಸ್ಥಾನ ಪಡೆದ ನಂತರ ಭಾರತಕ್ಕೆ ಮೊದಲ ಪದಕ ಗೆದ್ದುಕೊಟ್ಟರು.
ಟೆಹ್ರಾನ್ನಲ್ಲಿ ಶನಿವಾರ ನಡೆದ 1500 ಮೀಟರ್ ಓಟದಲ್ಲಿ ಬೈನ್ಸ್ 4:29.25 ಸೆಕೆಂಡುಗಳಲ್ಲಿ ಗುರಿ ತಲುಪಿ ಏಷ್ಯನ್ ಒಳಾಂಗಣ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಅಗ್ರ ಗೌರವಕ್ಕೆ ಪಾತ್ರರಾದರು.
ಕಿರ್ಗಿಸ್ತಾನದ ಕಲಿಲ್ ಕೈಜಿ ಐನುಸ್ಕಾ (4:35.29) ಎರಡನೇ ಸ್ಥಾನ ಪಡೆದರೆ, ಕಜಕಿಸ್ತಾನದ ಬೊಲಾಟ್ಬೆಕ್ಕಿ ಅಯಾನಾ (4:37.20) ಭಾರತದ ಉದಯೋನ್ಮುಖ ಅಥ್ಲೀಟ್ ಯರ್ರಾಜಿ ಏಷ್ಯನ್ ಒಳಾಂಗಣ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನ ಮೊದಲ ದಿನದಂದು ಮಹಿಳೆಯರ 60 ಮೀಟರ್ ಹರ್ಡಲ್ಸ್ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ತಮ್ಮ ಅಸಾಧಾರಣ ಓಟವನ್ನು ಮುಂದುವರಿಸಿದ್ದಾರೆ. ಯರ್ರಾಜಿ 8.12 ಸೆಕೆಂಡುಗಳಲ್ಲಿ ತಮ್ಮ ವೈಯಕ್ತಿಕ ಅತ್ಯುತ್ತಮ ಸಾಧನೆಯನ್ನು ಮಾಡಿದರು ಮತ್ತು ಹೊಸ ರಾಷ್ಟ್ರೀಯ ದಾಖಲೆಯನ್ನು ಅವರು ಸ್ಪರ್ಧೆಯಲ್ಲಿ ತಮ್ಮ ಮೊದಲ ಚಿನ್ನದ ಪದಕ ಮತ್ತು ಭಾರತದ ಎರಡನೇ ಪದಕವನ್ನು ಪಡೆದರು.