![](https://kannadadunia.com/wp-content/uploads/2022/02/BK-Hariprasad.jpg)
ಬೆಂಗಳೂರು : ಗುಜರಾತ್ ನ ಗೋಧ್ರಾ ದುರಂತ ರೀತಿ ಮತ್ತೊಮ್ಮೆ ಏನಾದ್ರೂ ಆಗಬಹುದು ಎಂದು ಎಂಎಲ್ ಸಿ ಬಿ.ಕೆ. ಹರಿಪ್ರಸಾದ್ ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಯೋಧ್ಯೆಯ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮದ ವೇಳೆ ಗೋಧ್ರಾ ರೀತಿ ಮತ್ತೊಮ್ಮೆ ಏನಾದ್ರೂ ಅಗಬಹುದು. ಮಾಹಿತಿ ಇಟ್ಟುಕೊಂಡೇ ಇದನ್ನು ಹೇಳುತ್ತಿದ್ದೇನೆ ಎಂದು ಹೇಳಿದ್ದಾರೆ.
ಅಯೋಧ್ಯೆಗೆ ಹೋಗುವವರಿಗೆ ಸರ್ಕಾರವೇ ರಕ್ಷಣೆ ಕೊಡಬೇಕು. ರಾಮಮಂದಿರವನ್ನು ಧಾರ್ಮಿಕ ಗುರುಗಳು ಉದ್ಘಾಟನೆ ಮಾಡುತ್ತಿದ್ದರೆ ನಾವು ಆಹ್ವಾನ ಇಲ್ಲದೇ ಹೋಗುತ್ತಿದ್ದೇವು. ಆದರೆ ಇದು ರಾಜಕೀಯ ಕಾರ್ಯಕ್ರಮವಾಗಿದೆ. ರಾಮಂದಿರವನ್ನು ಧಾರ್ಮಿಕ ಗುರುಗಳು ಉದ್ಘಾಟನೆ ಮಾಡುತ್ತಿದ್ದರೆ ನಾವು ಹೋಗುತ್ತಿದ್ದೇವು. ಮೋದಿ ಅವರು ಉದ್ಘಾಟನೆ ಮಾಡುತ್ತಿರುವುದು ರಾಜಕೀಯ ಕಾರ್ಯಕ್ರಮ ಇದು ಧಾರ್ಮಿಕ ಕಾರ್ಯಕ್ರಮವಲ್ಲ. ಶಂಕರಾಚಾರ್ಯರು ಅಥವಾ ಹಿಂದೂ ಧರ್ಮದ ನಾಯಕರು ಉದ್ಘಾಟನೆ ಮಾಡಬೇಕಾಗಿತ್ತು ಎಂದು ತಿಳಿಸಿದ್ದಾರೆ.