ಬೆಂಗಳೂರು : ಬೆಂಗಳೂರಿನಲ್ಲಿ ಬೆಚ್ಚಿ ಬೀಳಿಸುವ ಘಟನೆ ನಡೆದಿದ್ದು, 5 ವರ್ಷದ ಮಗಳನ್ನು ಕೊಂದು ತಾಯಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ.
ಬೆಂಗಳೂರಿನ ಬಾಗಲಗುಂಟೆಯ ರಾಮಯ್ಯ ಲೇಔಟ್’ ನಲ್ಲಿ ಈ ಘಟನೆ ನಡೆದಿದೆ. ಪುತ್ರಿ ರೋಷಿಣಿ (5) ಯನ್ನು ಕೊಂದು ಶ್ರುತಿ (33) ಎಂಬ ಮಹಿಳೆ ಸೂಸೈಡ್ ಮಾಡಿಕೊಂಡಿದ್ದಾರೆ.
10 ವರ್ಷಗಳ ಹಿಂದೆ ಚಾರ್ಟೆಡ್ ಅಕೌಂಟೆಂಟ್ ಜೊತೆ ವಿವಾಹವಾಗಿದ್ದ ಶ್ರುತಿ ಗ್ರಾಮ ಪಂಚಾಯತ್ ಒಂದರ ಅಧ್ಯಕ್ಷೆಯಾಗಿದ್ದರು. ಶೃತಿಗೆ ಇಬ್ಬರು ಮಕ್ಕಳಿದ್ದು, ಓರ್ವ ಪುತ್ರ ಹೊರಗಡೆ ಆಟವಾಡಲು ಹೋಗಿದ್ದಾಗ ತಾಯಿ ತನ್ನ ಮಗಳನ್ನು ಕೊಂದು ನೇಣಿಗೆ ಶರಣಾಗಿದ್ದಾರೆ.ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.